Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆರಿಗೆ ಮಾಡಿಕೊಂಡು, 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಡದಗದ್ದೆ ಬಳಿ ನಡೆದಿದೆ.
ಬಾಲಕಿ ಹಾಸ್ಟಲ್ ನ ಟಾಯ್ಲೆಟ್ ನಲ್ಲಿ ತಾನೇ ಹೆರಿಗೆ ಮಾಡಿಕೊಂಡು ಮಗುವನ್ನ ಕಿಟಿಕಿಯಿಂದ ಹೊರಗೆ ಎಸೆದಿದ್ದಾಳೆ. ಕಿಟಕಿಯಿಂದ ನವಜಾತ ಶಿಶು ಎಸೆದ ಹಿನ್ನೆಲೆ ಹೆಣ್ಣು ಶಿಶು ಸಾವನ್ನಪ್ಪಿದೆ. ಕಸ ಆರಿಸುವವರ ಕಣ್ಣಿಗೆ ಶಿಶುವಿನ ಶವ ಕಾಣಿಸಿದ್ದು, ತಕ್ಷಣ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೋಲೀಸರು ಬಾಲಕಿಯ ವಿಚಾರಣೆ ನಡೆಸಿದಾಗ, ತನ್ನ ದೊಡ್ಡಪ್ಪನ ಮಗನಿಂದಲೇ ಅತ್ಯಾಚಾರವಾಗಿ ಗರ್ಭದರಿಸಿರುವ ಆರೋಪ ಮಾಡಿದ ಮಾಡಿದ್ದಾಳೆ.
ಸ್ಥಳಕ್ಕೆ ಶಿರಸಿ ತಹಶಿಲ್ದಾರ್ ಪಟ್ಟರಾಜ್ ಗೌಡ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಲಕಿಯನ್ನ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




