Hubli News: ಹುಬ್ಬಳ್ಳಿ: ನಮ್ಮ ರಾಜ್ಯಕ್ಕೆ ಅನ್ಯಾಯ ಆಗ್ತಿದೆ. ಬರಗಾಲ ಬಂದಾಗ ಅನುದಾನ ಕೊಡಲಿಲ್ಲ. ಒಬ್ಬ ಸಂಸದರೂ ಧ್ವನಿ ಎತ್ತಲಿಲ್ಲ ಎಂದು ಹುಬ್ಬಳ್ಳಿ ಹೊರವಲಯದಲ್ಲಿ ಡಿಸಿಎಮ್ ಡಿ.ಕೆ ಶಿವಕುಮಾರ್ ಹೇಳಿದರು.
ವಿಜಯಪುರ ಪ್ರವಾಸದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಹೊರವಲಯದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಂಚೂರು ಅನುದಾನ ಕೊಡಲಿಲ್ಲ. ನೀರಾವರಿಗೆ 5,200 ಕೋಟಿ ಅನುದಾನ ಘೋಷಣೆ ಮಾಡಿತ್ತು. ಒಂದು ರೂಪಾಯಿಯೂ ಬರಲಿಲ್ಲ. ನಾವು ಕಾಯ್ದಿದ್ದೇವೆ. ಈಗ ವಿಧಿ ಇಲ್ಲ. ನಾವು ಧ್ವನಿ ಎತ್ತಬೇಕು. ರಾಜ್ಯದ ಹಿತ ಕಾಪಾಡಬೇಕು ಎಂದರು.
ನಾನು ಮತ್ತು ಸಿಎಂ ಪತ್ರಿಕಾಗೋಷ್ಠಿಯಲ್ಲಿ ಮಾತಾಡ್ತೀವಿ. ಜೋಶಿ ಅವರು ಮನಸ್ಸು ಮಾಡಿದ್ರೆ ಏನೆಲ್ಲ ಕೊಡಿಸಬಹುದು. ನಮ್ಮ ಸರ್ಕಾರ ಬಿಡಿ, ಬೊಮ್ಮಾಯಿ ಸರ್ಕಾರಕ್ಕೆ ಏನ ಮಾಡಿದ್ರಿ ಹೇಳಿ. ಬರಗಾಲದ ಹಣ ನಾವು ಕೊಟ್ಟಿದ್ದೇವೆ. ಬೋರ್ವೆಲ್ ಕೊರೆಯೋಕೆ ಡಿಸಿ ಅವರಿಗೆ ಹೇಳಿದ್ದೇವೆ. ನೀರಿನ ಸಮಸ್ಯೆ ಆಗದಂತೆ ಸೂಚನೆ ಕೊಟ್ಟಿದ್ದೇವೆ ಎಂದು ಅವರು ಹೇಳಿದರು.
ಪೊರಕೆ ಹಿಡಿದು ಬೀದಿ ಸ್ವಚ್ಛಗೊಳಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್
ಅಡ್ವಾಣಿಯವರಿಗೆ ಭಾರತ ರತ್ನ ನೀಡಿರುವುದು ಖುಷಿ ತಂದಿದೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್
ಡಿಸಿಎಂ ಡಿಕೆಶಿಗೆ ಅಭಿಮಾನ ತೋರಿಸಲು ಹೋಗಿ ಬಯ್ಯಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು