Chennai: ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿರಲಿ ಎಂದು ಆಕೆಯನ್ನು ಹೆತ್ತವರು, ಕೇಳಿದಷ್ಟು ವರದಕ್ಷಿಣೆ ನೀಡಿದ್ದರು. ಕೋಟಿ ಕೋಟಿ ಹಣ, ಕಾರ್ ನೀಡಿದರೂ ಅಳಿಯನಾದವನು ಮಾತ್ರ, ಮಗಳ ಜೀವ ಉಳಿಸುವಲ್ಲಿ ವಿಫಲನಾಗಿದ್ದಾನೆ.
ವರದಕ್ಷಿಣೆ ಕಿರುಕುಳ ತಾಳಲಾರದೇ, ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಈ ವಿವಾಹ ನಡೆದಿತ್ತು. ತಮಿಳುನಾಡಿನ ತಿರುಪ್ಪೂರಿನಲ್ಲಿ 27 ವರ್ಷದ ರಿಧನ್ಯಾ ಎಂಬಾಕೆ, 28 ವರ್ಷದ ಕವಿನ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದಳು. ಈ ವೇಳೆ ರಿಧನ್ಯಾ ಪೋಷಕರು, ಕವಿನ್‌ಗೆ 800 ಗ್ರಾಂ ಚಿನ್ನಾಭರಣ, 70 ಲಕ್ಷ ಮೌಲ್ಯದ ಓಲ್ವೋ ಕಾರ್ ವರದಕ್ಷಿಣೆಯಾಗಿ ನೀಡಿದ್ದರು.
ಆದರೆ ಮನೆಯಲ್ಲಿ ನೀಡುವ ಹಿಂಸೆ ತಾಳಲಾರದೇ ರಿಧ್ನ್ಯಾ ಕೀಟನಾಶಕ ಸೇವಿಸಿ, ಆತ್ಮಹತ್ಯೆ ಮಾಡಿಕ“ಂಡಿದ್ದಾಳೆ. ನಡುರಸ್ತೆಯಲ್ಲಿ ಕಾರ್ ನಿಲ್ಲಿಸಿ, ಕಾರ್‌ನಲ್ಲಿಯೇ ಕೀಟನಾಶಕ ಸೇವಿಸಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾರ್ ತುಂಬ ಸಮಯ ರಸ್ತೆಯಲ್ಲೇ ಇರುವುದನ್ನು ಗಮನಿಸಿದ್ದ ಸ್ಥಳೀಯರು, ಪೋಲೀಸರಿಗೆ ಮಾಹಿತಿ ನೀಡಿದಾಗ, ಘಟನೆ ಬೆಳಕಿಗೆ ಬಂದಿದೆ.
ಸಾವಿಗೂ ಮುನ್ನ ರಿಧನ್ಯಾ, ಅಪ್ಪನಿಗೆ 7 ಆಡಿಯೋ ಸಂದೇಶ ಕಳುಹಿಸಿದ್ದಾಳೆ. ಅದರಲ್ಲಿ ಪತಿಯ ಮನೆಯವರು ನೀಡುತ್ತಿರುವ ಹಿಂಸೆ ತಾಳಲಾರದೇ ಈ ನಿರ್ಧಾರಕ್ಕೆ ಬಂದಿದ್ದೇನೆ. ಇಂಥ ನಿರ್ಧಾರ ತೆಗೆದುಕ“ಳ್ಳುತ್ತಿರುವುದಕ್ಕೆ ಕ್ಷಮೆ ಇರಲಿ. ನನ್ನ ಅತ್ತೆ ನನ್ನನ್ನು ಬೇರೆಯವರ ಜತೆ ಮದುವೆ ಮಾಡಿಕ“ಡಲು ನಿರ್ಧರಿಸಿದ್ದರು. ಅವರ ಹಿಂಸೆ ತಾಳಲಾರದೇ ೀ ನಿರ್ಧಾರಕ್ಕೆ ಬಂದಿದ್ದೇನೆ ಎಂದು ರಿಧನ್ಯಾ ಆಡಿಯೋದಲ್ಲಿ ಹೇಳಿದ್ದಾಳೆ.
ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.