Hubli News: ಹುಬ್ಬಳ್ಳಿ: ಹುಬ್ಬಳ್ಳಿ ಸೇರಿ ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ಕಿಡಿಗೇಡಿಗಳು ಹುಸಿ ಬಾಾಂಬ್ ಬೆದರಿಕೆ ಹಾಕಿದ್ದಾರೆ. ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಬೆಂಗಳೂರು ವಿಮಾನ ನಿಲ್ದಾಣ ನಿರ್ದೇಶಕರಿಗೆ ಹುಸಿ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ.
ಈ ಇ- ಮೇಲ್‌ನಲ್ಲಿ ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. Roadkill kyo ಎಂಬ ಇ- ಮೇಲ್ ಐಡಿಯಿಂದ ಈ ಬೆದರಿಕೆ ಸಂದೇಶ ಬಂದಿದೆ.
ಇದರಿಂದಾಗಿ ಭದ್ರತಾ ಪಡೆಗಳು ಫುಲ್ ಅಲರ್ಟ್ ಆಗಿದ್ದಾರೆ. ಇ-ಮೇಲ್ ಮೂಲದ ಬಗ್ಗೆ ತೀವ್ರ ಪರಿಶೀಲನೆ ನಡೆಸಿದಾಗ ಇದು ಹುಸಿ ಇ-ಮೇಲ್ ಎಂದು ತಿಳಿದು ಬಂದಿದೆ.. ಹೀಗಿದ್ದರೂ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂಥ ಹುಸಿ ಬೆದರಿಕೆ ಕರೆಗಳು ಬರುವುದು ಹೆಚ್ಚಾಗುತ್ತಿದೆ. ಆದರೆ ಹೀಗೆ ಹುಸಿ ಬೆದರಿಕೆ ಕರೆ, ಇ ಮೇಲ್ ಬಂದು ಬಂದು, ಸತ್ಯಕ್ಕೂ ಯಾರಾದ್ರೂ ಈ ರೀತಿ ಕೆಲಸ ಮಾಡುವ ಎಲ್ಲ ಸಾಧ್ಯತೆ ಇದೆ. ಹಾಗಾಗಿ ಇದನ್ನು ನಿರ್ಲಕ್ಷಿಸದೇ, ಕಟ್ಟೆಚ್ಚರ ವಹಿಸಲಾಗಿದೆ.