Tumakuru News: ಮಾಜಿ ಸಿಎಂ ಯಡಿಯೂರಪ್ಪ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ 7ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿರುವ ಅವರು, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ 7 ನೇ ವರ್ಷದ ಪುಣ್ಯ ಸ್ಮರಣೆಯಂದು, ಅವರ ಗದ್ದುಗೆ ದರ್ಶನ ಮಾಡಿ ಅವರ ಆಶಿರ್ವಾದವನ್ನ ಪಡೆಯೋದಿಕ್ಕೆ ನಾವೆಲ್ಲಾ ಇಲ್ಲಿಗೆ ಬಂದಿದ್ದೇವೆ. ನಡೆದಾಡುವ ದೇವರು ಪರಮಪೂಜ್ಯ ಸಿದ್ದಗಂಗಾ ಶ್ರೀಗಳು ಈ ನಾಡಿನ ಚೈತನ್ಯ ಸ್ವರೂಪರು.
ಬೌದ್ಧಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರು ಸಹ, ಅವರ ಬದುಕು, ಅವರ ಸಾಧನೆ ಉಪದೇಶಗಳು ಎಲ್ಲರಿಗೂ ದಾರಿ ದೀಪವಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಅನ್ನ, ಅಕ್ಷರ, ಆಶ್ರಯ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡ ಮಕ್ಕಳ ಬದುಕಿನಲ್ಲಿ ಬೆಳಕು ನೀಡಿದ ಮಹಾನ್ ಸಂತರು. ಅವರ ಮಾರ್ಗದರ್ಶನದಂತೆ ಪ್ರಾಮಾಣಿಕವಾಗಿ ಜನಸೇವೆ ಮಾಡಿಕೊಂಡು ಬಂದಿದ್ದೇನೆ.
ನಾಡಿನ ಮೇಲೆ ಭಕ್ತರ ಮೇಲೆ ಅವರ ಆಶಿರ್ವಾದ ಸದಾ ಇರಲಿ ಅನ್ನೋದೆ ನನ್ನ ಪ್ರಾರ್ಥನೆ. ಪ್ರತಿನಿತ್ಯ ನಾನು ಎದ್ದ ತಕ್ಷಣ ಮೊದಲು ನೆನಪು ಮಾಡಿಕೊಳ್ಳೋದು ಶಿವಕುಮಾರ ಸ್ವಾಮೀಜಿ ಅವರನ್ನ. ಅವರು ಒಂದು ಶಕ್ತಿ.
ಇವತ್ತು ನಮ್ಮ ಕುಟುಂಬಕ್ಕೆ ಸ್ಥಾನಮಾನಗಳು ಸಿಕ್ಕಿರಬೇಕು ಅಂದ್ರೆ ಅದಕ್ಕೆ ಸಂಪೂರ್ಣ ಅವರ ಆಶಿರ್ವಾದ ಕಾರಣ. ಅದಕ್ಕಾಗಿ ಇಲ್ಲಿಗೆ ಬಂದು ಅವರ ಸ್ಮರಣೆ ಮಾಡುವಂತಹ ಅವಕಾಶ ಸಿಕ್ಕಿದೆ ಬಂದಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ದಾಸೋಹ ದಿನ ಅನುಷ್ಠಾನಕ್ಕೆ ಬಂದಿಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಮಾತನಾಡ್ತಿನಿ ಎಂದು ಹೇಳಿದರು.




