Friday, December 5, 2025

Latest Posts

ಪ್ರಚಾರದ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ತಲೆಗೆ ಕಲ್ಲಿನೇಟು, ಡಿಕೆಶಿ ಆಕ್ರೋಶ..

- Advertisement -

ತುಮಕೂರು: ತುಮಕೂರಿನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಮಾಜಿ ಡಿಸಿಎಂ, ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ್ ತಲೆಗೆ ಕಲ್ಲಿನೇಟು ಬಿದ್ದಿದೆ.

ಇಂದು ಕೊರಟಗೆರೆ ತಾಲೂಕಿನ ಬೈರನಹಳ್ಳಿ ಕ್ರಾಸ್ ಬಳಿ, ಜಿ.ಪರಮೇಶ್ವರ್ ಮತಯಾಚನೆ ಮಾಡುತ್ತಿದ್ದರು. ಈ ವೇಳೆ ಅವರಿಗೆ ಬೃಹತ್ ಹೂವಿನ ಹಾರ ಹಾಕಿ ಸ್ವಾಗತ ಕೋರಲಾಯಿತು. ಇದೇ ವೇಳೆ ಆ ಸ್ಥಳದಲ್ಲಿ ಹಲವಾರು ಕಾಂಗ್ರೆಸ್ ಬೆಂಬಲಿಗರು, ಮುಖಂಡರು ಅವರ ಸುತ್ತಮುತ್ತಲೂ ಇದ್ದರೂ ಕೂಡ, ಯಾರೋ ಕಿಡಿಗೇಡಿಗಳು, ಪರಮೇಶ್ವರ್ ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ.

ತಲೆಗೆ ಪೆಟ್ಟು ಬಿದ್ದು, ರಕ್ತಸ್ತಾವವಾಗಿದ್ದು, ಅಕಿರಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪರಮೇಶ್ವರ್‌ಗೆ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಟ್ವೀಟ್ ಮಾಡಿದ್ದು, ತುಮಕೂರಿನ ಬೈರನಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಜಿ ಉಪ ಮುಖ್ಯಮಂತ್ರಿ ಶ್ರೀ ಜಿ. ಪರಮೇಶ್ವರ ಅವರ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ತೀವ್ರ ಕಳವಳಕಾರಿ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹಿಂಸೆಗೆ ಅವಕಾಶವಿಲ್ಲ. ಘಟನೆಗೆ ಕಾರಣನಾದ ವ್ಯಕ್ತಿಯನ್ನು ಈ ಕೂಡಲೇ ಬಂಧಿಸಬೇಕು. ಪರಮೇಶ್ವರ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಅತೀಯಾದರೆ ಅಮೃತವೂ ವಿಷ ಎಂಬುವುದಕ್ಕೆ ಈ ಮಾಡೆಲ್ ಉದಾಹರಣೆ.

‘ಬೈಕ್ ಗಲಾಟೆಗೆ ಬಣ್ಣ ಬಳಿದು, ಆರೋಪ ಮಾಡುತ್ತಿರುವ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಿ’

‘ದಮ್-ತಾಕತ್ ಇದ್ದ ಸಿಎಂ ಅಥವಾ 56 ಇಂಚಿನ ಎದೆಯ ಪ್ರಧಾನಿ ಬರಲಿ, ನಾನು ಚರ್ಚೆಗೆ ಸಿದ್ಧ’

- Advertisement -

Latest Posts

Don't Miss