ಮಂಡ್ಯ: ಜಿಲ್ಲಾ ಜೆಡಿಎಸ್ ನವರು ಕಾಂಗ್ರೆಸ್ಸಿಗರಿಗೆ ನಿರಂತವಾಗಿ ಕಿರುಕುಳ ನೀಡ್ತಿದ್ದಾರೆ. ಹೀಗೆ ಆದ್ರೆ ನಾವು ಬೀದಿಗಿಳಿದು ಹೋರಾಟ ಮಾಡ್ತೀವಿ ಅಂತ ಮಾಜಿ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ
ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಮಂಡ್ಯದಲ್ಲಿ ಜೆಡಿಎಸ್ ನವರು ಕಾಂಗ್ರೆಸ್ಸಿಗರನ್ನ ಟಾರ್ಗೆಟ್ ಮಾಡಿ ನಿರಂತರವಾಗಿ ಕಿರುಕುಳ ನೀಡ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಮೇಲೆ ಮಂಡ್ಯ ಕಾಂಗ್ರೆಸ್ಸಿಗರು ಸಭೆ ನಡೆಸುತ್ತೀವಿ. ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಜೊತೆ ಈ ಕುರಿತು ಮಾತನಾಡ್ತೀವಿ ಎಂದಿದ್ದಾರೆ.
‘ಸುಮಲತಾ ಬಿಜೆಪಿ ಸೇರೋದು ಊಹಾಪೋಹ’
ಇನ್ನು ಸುಮಲತಾ ಬಿಜೆಪಿಗೆ ಸೇರೋ ವಿಚಾರವಾಗಿ ಮಾತನಾಡಿದ ಚಲುವರಾಯಸ್ವಾಮಿ, ಸುಮಲತಾ ಬಿಜೆಪಿಗೆ ಹೋಗೋದು ಬರೀ ಊಹಾಪೋಹ, ಆದ್ರೆ ಕಾಂಗ್ರೆಸ್ ಪಕ್ಷ ಸೇರೋ ಬಗ್ಗೆ ನನಗೆ ಗೊತ್ತಿಲ್ಲ. ಅವರೇ ತೀರ್ಮಾನ ತೆಗೆದುಕೊಳ್ತಾರೆ ಅಂದ್ರು.
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಂತೆ ಸಚಿವ ಡಿ.ಸಿ.ತಮ್ಮಣ್ಣ…! ತಿಳಿದುಕೊಳ್ಳೋಕೆ ಈ ವಿಡಿಯೋ ತಪ್ಪದೇ ನೋಡಿ