ಬೆಂಗಳೂರು: ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ ಸ್ಥಿರ ಸರ್ಕಾರ ನಡೆಸಲು ಸಾಧ್ಯವಿಲ್ಲ ಕುಮಾರಸ್ವಾಮಿ ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ ಡಿಕೆಶಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೆ ನಮಗೆ ಕೈಕೊಟ್ಟ ಅತೃಪ್ತರನ್ನು ನಂಬಿ ಸರ್ಕಾರ ರಚಿಸಲು ಹೊರಟಿರೋ ಯಡಿಯೂರಪ್ಪನ ಪ್ಯಾಂಟ್ ಶರ್ಟ್ ಹರಿದು ಕೈಗೆ ಕೊಡ್ತಾರೆ, ಬಿಎಸ್ವೈ ಕಥೆ ಗೋವಿಂದಾ ಅಂತ ಡಿಕೆಶಿ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಡಿಕೆಶಿ, ಅತೃಪ್ತ ಶಾಸಕರನ್ನು ನಂಬಿ ಸರ್ಕಾರ ರಚಿಸೋದಕ್ಕೆ ಬಿಜೆಪಿ ಹೊರಟಿದೆ. ಅತೃಪ್ತರೇನೂ ಸಾಮಾನ್ಯದವರಲ್ಲ, ಅವರು ಯಡಿಯೂರಪ್ಪನನ್ನ ಸುಮ್ಮನೆ ಬಿಡೋದಿಲ್ಲ. ಪ್ಯಾಂಟ್ ಶರ್ಟ್ ಹರಿದು ಕೈಗೆ ಕೊಡ್ತಾರೆ ಅಷ್ಟೇ ಅಂತ್ ಲೇವಡಿ ಮಾಡಿರುವ ಡಿಕೆಶಿ, ಅತೃಪ್ತರ ಪೈಕಿ ಕುಮಟಳ್ಳಿ ಒಬ್ಬ ಸೈಲೆಂಟ್ ಆಗಿರ್ತಾನೆ ಆತನನ್ನು ಬಿಟ್ಟು ಉಳಿದವರೋ ಅಬ್ಬಬ್ಬಾ ಅವರನ್ನ ನಂಬಲು ಅಸಾಧ್ಯ ಅಂತ ಹೇಳಿದ್ರು.
ಇನ್ನು ಅತೃಪ್ತ ಶಾಸಕರು ಯಡಿಯೂರಪ್ಪ ಜೊತೆಗೇ ಪ್ರಮಾಣವಚನ ಮಾಡಿಕೊಂಡರೆ ಅವರಿಂದ ಬಜಾವ್ ಆಗಬಹುದು. ಇಲ್ಲದಿದ್ರೆ ಅವರ ಕಥೆ ಗೋವಿಂದಾ ಗೋವಿಂದಾ ಅಂತ ಬಿ.ಎಸ್ ಯಡಿಯೂರಪ್ಪನವರನ್ನು ಮೂದಲಿಸಿದ್ದಾರೆ. ಇನ್ನು ರಾಜ್ಯ ಬಿಜೆಪಿ ನಾಯಕರು ಕೂಡ ಅತೃಪ್ತ ಶಾಸಕರ ಬಗ್ಗೆ ತಲೆಕೆಡಿಸಿಕೊಂಡು ಹೈಕಮಾಂಡ್ ಜೊತೆ ಚರ್ಚಿಸಲು ದೆಹಲಿಗೆ ದೌಡಾಯಿಸಿದ್ದಾರೆ. ಈ ಕುರಿತು ಬೆಳಗ್ಗಿನಿಂದ ಬಿಜೆಪಿ ನಿಯೋಗದೊಂದಿಗೆ ಚರ್ಚಿಸಿರೋ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.