Political News: ತುಮಕೂರು : ತುಮಕೂರಿನಲ್ಲಿ ಮಾಜಿ ಸಚಿವ ವಿ.ಸೋಮಣ್ಣ ಶಕ್ತಿ ಪ್ರದರ್ಶನವಾಗಲಿದ್ದು, ಗುರುಭವನ ಉದ್ಘಾಟನೆ ನೆಪದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ವಿ.ಸೋಮಣ್ಣನವರು ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಸಿದ್ದಗಂಗಾ ಮಠದಲ್ಲಿ ಗುರುಭವನ ಉದ್ಘಾಟನೆಯಾಗುತ್ತಿದೆ. ಕಾಂಗ್ರೆಸ್ ನಾಯಕರೇ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮವಾಗಿದೆ.
ಸೋಮಣ್ಣ ಸಚಿವರಾದ ಪರಮೇಶ್ವರ್, ರಾಜಣ್ಣಗೆ ಆಹ್ವಾನ ನೀಡಿದ್ದಾರೆ. ಕಾರ್ಯಕ್ರಮದ ನಂತರ ಸೋಮಣ್ಣ ರಾಜಕೀಯ ಸ್ಪೋಟ ಮಾಡ್ತಾರಾ, ಗುರುಭವನ ಲೋಕಾರ್ಪಣೆ ನಂತರ ಎಲ್ಲವನ್ನೂ ಬಹಿರಂಗ ಮಾಡ್ತಾರಾ..? ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ. ವಿ.ಸೋಮಣ್ಣ ಪ್ರತಿಷ್ಠಾನದಿಂದ ಗುರುಭವನ ನಿರ್ಮಾಣಗೊಂಡಿದೆ. ಸೋಮಣ್ಣ ಈಗಾಗಲೇ ಕುಟುಂಬ ಸಮೇತ ಸಿದ್ದಗಂಗಾ ಮಠಕ್ಕೆ ಬಂದಿದ್ದಾರೆ. ಪತ್ನಿ ಶೈಲಜಾ ಸೋಮಣ್ಣ, ಪುತ್ರ ಅರುಣ್ ಸೋಮಣ್ಣ ಸಾಥ್ ನೀಡಿದ್ದಾರೆ. ಶಿವೈಕ್ಯ ಶಿವಕುಮಾರ್ ಸ್ವಾಮೀಜಿಗಳ ಗದ್ದುಗೆಗೆ ಸೋಮಣ್ಣ ದಂಪತಿ ಪೂಜೆ ಸಲ್ಲಿಸಿದ್ದಾರೆ.
ಗುರುಭವನ ಉದ್ಘಾಟನೆಗೂ ಮುನ್ನ ವಿ.ಸೋಮಣ್ಣ ಮಾತನಾಡಿ ಇವತ್ತು ನನಗೆ ಅತ್ಯಂತ ಸಂತೋಷದ ದಿನ. ನಾನು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಗುರುಭವನ ನಿರ್ಮಾಣ ಮಾಡುವ ಪುಣ್ಯ ನನಗೆ ಸಿಕ್ಕಿದೆ, ಶಿವಕುಮಾರ ಶ್ರೀಗಳ ಆಶೀರ್ವಾದದಿಂದ ಒಳ್ಳೆ ಕೆಲಸ ನಡೀತಿದೆ. ಕಾರ್ಯಕ್ರಮಕ್ಕೆ ಗೃಹ ಸಚಿವ ಪರಮೇಶ್ವರ್, ಕೆ.ಎನ್.ರಾಜಣ್ಣ ಬರ್ತಿದ್ದಾರೆ. ಈ ಸ್ಥಳದಲ್ಲಿ ಯಾವುದೇ ರಾಜಕೀಯ ವಿಚಾರ ಮಾತಾಡೋದಿಲ್ಲ, ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪ ಮಾಡೋದು ಸರಿಯಲ್ಲ. ಕಾರ್ಯಕ್ರಮ ಮುಗಿದ ಬಳಿಕ ರಾಜಕೀಯ ಮಾತನಾಡುತ್ತೇನೆ. ರಾಜಕೀಯಕ್ಕೂ ಗುರುಭವನ ಕಾರ್ಯಕ್ರಮಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.
‘ಅಲ್ಪಸಂಖ್ಯಾತ ಇಲಾಖೆಗೆ ಕೊನೆಯದಾಗಿ 10 ಸಾವಿರ ಕೋಟಿ ಮಾಡಬೇಕು ಅನ್ಕೊಂಡಿದ್ದೀನಿ’
‘ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ’