ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗೋದ್ರಲ್ಲಿ ಸಂಶಯವೇ ಇಲ್ಲ ಎಂದಿದ್ದ ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಗೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೋಯ್ಲಿ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಮೊಯ್ಲಿ, ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಹೋಗಲು ಯಾವ ಶಾಸಕರೂ ತಯಾರಿಲ್ಲ. ಅಲ್ಲದೆ ಮತ್ತೆ ಚುನಾವಣೆ ಎದುರಾದರೆ ಜನರು ಕೂಡ ಸಹಿಸಿಕೊಳ್ಳೋದಿಲ್ಲ ಅಂತ ಹೇಳಿದ್ರು. ಅಲ್ಲದೆ ಮೈತ್ರಿ ಸರ್ಕಾರ ಎಷ್ಟು ದಿನ ನಡೆಯುತ್ತೋ ಅಂತ ಹೇಳಿದ್ದ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿರೋ ಅವರು, ದೇವೇಗೌಡ್ರು ಹೇಗೆ ಬೇಕಾದ್ರೂ ಮಾತು ಬದಲಿಸ್ತಾರೆ ಅಂತ ಕಿಡಿ ಕಾರಿದ್ರು.
ಇನ್ನು ಮೈತ್ರಿ ಸರ್ಕಾರ ಪತನ ಗೊಳಿಸೋ ಬಿಜೆಪಿ ಯತ್ನ ಕುರಿತಾಗಿ ಮಾತನಾಡಿದ ವೀರಪ್ಪ ಮೊಯ್ಲಿ, ಹಣ್ಣು ಇರುವ ಮರವನ್ನು ಬಿಜೆಪಿಯವರು ಅಲುಗಾಡಿಸ್ತಿದ್ದಾರೆ. ಈ ಮೂಲಕ ಯಡಿಯೂರಪ್ಪ ಮತ್ತೆ ಸಿಎಂ ಆಗೋ ಕನಸು ಕಾಣ್ತಿದ್ದಾರೆ ಅಂತ ಲೇವಡಿ ಮಾಡಿದ್ರು.
ಈ ಬಾರಿ ಆಪರೇಷನ್ ಪಕ್ಕಾ..! ಜೂನ್ ತಿಂಗಳಲ್ಲಿ ಏನಾಗುತ್ತೆ ಗೊತ್ತಾ..?ಮಿಸ್ ಮಾಡದೇ ಈ ವಿಡಿಯೋ ನೋಡಿ