ಹೊಸದಿಲ್ಲಿ: ವೇಗಿ ಉಮ್ರಾನ್ ಮಲ್ಲಿಕ್ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದರೆ ಎದುರಾಳಿಗಳಿಗೆ ಕಠಿಣ ಬೌಲರ್ ಆಗಲಿದ್ದಾರೆ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ಜೂ.9ರಿಂದ ತವರಿನಲ್ಲಿ ದ.ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯಲಿದೆ.
ಇತ್ತಿಚೆಗಷ್ಟೆ ಐಪಿಎಲ್ ನಲ್ಲಿ ವೇಗದ ಬೌಲಿಂಗ್ ಮೂಲಕ ಮಿಂಚು ಹರಿಸಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ಚೊಚ್ಚಲ ಬಾರಿಗೆ ಆಯ್ಕೆಯಾಗಿರುವ ವೇಗಿ ಉಮ್ರಾನ್ ಮಲ್ಲಿಕ್ ಕುರಿತು ರವಿಶಾಸ್ತ್ರಿ ಈ ಅಭಿಪ್ರಾಯಪಟ್ಟಿದ್ದಾರೆ.
ಸನ್ ರೈಸರ್ಸ್ ಪರ ಆಡಿದ್ದ ವೇಗಿ ಉಮ್ರಾನ್ ಮಲ್ಲಿಕ್, ಒಟ್ಟು 22 ವಿಕೆಟ್ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ನಾಲ್ಕನೆ ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಜೊತೆಗೆ 157 ಕೀ.ಮೀ. ಬೌಲಿಂಗ್ ಹಾಕಿ ವೇಗದ ಬೌಲರ್ ಎನಿಸಿದ್ದರು.
ಜಮ್ಮು ಎಕ್ಸ್ ಪ್ರೆಸ್ ಎಂದು ಕರೆಯಲ್ಪುಡುವ ಉಮ್ರಾನ್ ಮಲ್ಲಿಕ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಉಮ್ರಾನ್ ಮಲ್ಲಿಕ್ ಸ್ಥಿರ ಪ್ರದರ್ಶನ ನೀಡಬೇಕು. ಅಭ್ಯಾಸ ಮಾಡುವಾಗ ಲೈನ್ ಹಾಗೂ ಲಂತ್ ಬಗ್ಗೆ ಗಮನವಿಟ್ಟು ವಿಕೆಟ್ಗ ಬೌಲಿಂಗ್ ಮಾಡಿದರೆ ಒಳ್ಳೆಯ ಪ್ರದರ್ಶನ ನಿಡಬಹುದೆಂದು ರವಿಶಾಸ್ತ್ರಿ ಹೇಳಿದ್ದಾರೆ.