ದೆಹಲಿ: ಎಕ್ಸ್ ಪ್ರೆಸ್ ರೈಲುಗಳಿಗೆ ಡಿಕ್ಕಿ ಹೊಡೆದು ದನಕರುಗಳು ಸಾವನ್ನಪ್ಪುತ್ತಿವೆ. ಈ ಹಿನ್ನೆಲೆ ಹಳಿಗಳ ಪಕ್ಕದಲ್ಲಿ ಬೇಲಿ ಹಾಕಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ವರ್ಷದಿಂದ ವರ್ಷಕ್ಕೆ ಜಾನುವಾರಗಳ ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಇಲಾಖೆ ಬೇಲಿ ಹಾಕುವ ನಿರ್ಧಾರ ಮಾಡಿದೆ. ಏಪ್ರೀಲ್ ನಿಂದ ಇಲ್ಲಿಯವರೆಗೆ 2,650 ದನಗಳು ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿವೆ. ಐದಾರು ತಿಂಗಳುಗಳಲ್ಲಿ 1,000 ಕಿಮೀ ಉದ್ದಕ್ಕೂ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಘೋಷಿಸಿದ್ದಾರೆ.
RBI ಜೊತೆ ವ್ಯಾಪಕ ಮಾತುಕತೆ ನಂತರ ನೋಟುಗಳ ನಿಷೇಧ ಜಾರಿ : ಕೋರ್ಟ್ ಗೆ ತನ್ನ ನಿರ್ಧಾರ ಸಮರ್ಥಿಸಿಕೊಂಡ ಕೇಂದ್ರ
ಪ್ರಯಾಗ್ ರಾಜ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಉತ್ತರ-ಮಧ್ಯ ರೈಲ್ವೆ ವಿಭಾಗದಲ್ಲಿಯೇ ಹೆಚ್ಚು ಜಾನುವಾರುಗಳು ಸಾವನ್ನಪ್ಪಿರುವ ಪ್ರಕರಣಗಳು ವರದಿಯಾಗಿವೆ. ಇದೇ ವಿಭಾಗದಲ್ಲಿಯೇ ಅತಿಹೆಚ್ಚು ದನಗಳು ರೈಲಿಗೆ ಸಿಕ್ಕು ಮೃತಪಟ್ಟಿವೆ. ಇತ್ತೀಚೆಗೆ ಸಂಚಾರ ಆರಂಭಿಸಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ಕೂಡ ಇದರಲ್ಲಿ ಸೇರುತ್ತದೆ. ರೈಲುಗಳ ಸಂಚಾರಕ್ಕೆ ಜಾನುವಾರಗಳಿಂದ ತೊಂದರೆಯಾಗುತ್ತಿದ್ದು, ರೈಲುಗಳ ಸುಗಮ ಸಂಚಾರಕ್ಕೆ ಅನುಕುಲವಾಗಲು ಕಾಂಪೌಂಡ್ ನಿರ್ಮಿಸಲಾಗುವುದು. ಇದಕ್ಕೆ ಎರಡು ವಿನ್ಯಾಸಗಳನ್ನು ಪರಿಶೀಲಿಸಿ ಒಂದು ಮಾದರಿ ಫೈನಲ್ ಮಾಡಲಾಗುವುದು.
ಹಳಿಗಳ ಪಕ್ಕದಲ್ಲಿ ಕಲ್ಲಿನ ಗೋಡೆಗಳನ್ನು ನಿರ್ಮಿಸಲಾಗುವುದು ಎಂದು ರೈಲ್ವೆ ಇಲಾಖೆ ಸಚಿವರು ತಿಳಿಸಿದ್ದಾರೆ. ಗಂಟೆಗೆ 130 ಕಿಮೀಗೂ ಹೆಚ್ಚು ವೇಗವಾಗಿ ಚಲಿಸುವ ರೈಲುಗಳು ಇರುವ ಮಾರ್ಗದಲ್ಲಿ ಹಳಿಗಳ ಪಕ್ಕದಲ್ಲಿ ಕಡ್ಡಾಯವಾಗಿ ಬೇಲಿ ನಿರ್ಮಿಸಬೇಕೆಂದು ರೈಲ್ವೆ ಸುರಕ್ಷತಾ ಆಯುಕ್ತರು ನಿರ್ದೇಶಿಸಿದ್ದಾರೆ. ಕಬ್ಬಣದ ಬೇಲಿಯಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ. ದನಗಳು ಬೇಲಿಯೊಳಗೆ ನುಸುಳಿದರೆ ಹೊರಗೆ ಬರಲು ಕಷ್ಟವಾಗಬಹುದು ಹಾಗಾಗಿ ಗ್ರಮಸ್ಥರು ಪ್ರತಿಭಟಿಸಬಹುದೆಂದು ರೈಲ್ವೆ ಇಲಾಖೆ ಅಧಿಕಾರಿಗಳು ಆತಂಕ ಕೂಡ ಪಟ್ಟಿದ್ದಾರೆ.