Saturday, July 27, 2024

Latest Posts

ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 1

- Advertisement -

ಬಟ್ಟೆ ಅನ್ನೋದು ನಮ್ಮ ಸಂಸ್ಕೃತಿಯನ್ನ ತೋರಿಸುತ್ತದೆ. ಮನುಷ್ಯ ಉತ್ತಮ ಗುಣದವನಾಗಿದ್ರೂ, ಅವನು ಧರಿಸುವ ಬಟ್ಟೆ ಸರಿಯಾಗಿಲ್ಲದಿದ್ದರೆ, ಅವನನ್ನು ಯಾರೂ ಇಷ್ಟ ಪಡುವುದಿಲ್ಲ. ಹಾಗಾಗಿ ಹಿರಿಯರು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಅಂತಾ ಹೇಳಿದ್ದು. ಹಾಗಾಗಿ ನಾವಿಂದು ಬಟ್ಟೆ ಧರಿಸುವಾಗ ಯಾವ 6 ತಪ್ಪನ್ನು ಮಾಡಬಾರದು ಅಂತಾ ಹೇಳಲಿದ್ದೇವೆ..

ಮೊದಲನೇಯ ನಿಯಮ, ಅವಕಾಶಗಳು ಯಾವ ರೀತಿ ಇರುತ್ತದೆಯೋ, ಆ ರೀತಿ ಬಟ್ಟೆ ಧರಿಸಿ. ನೀವು ಮದುವೆಗೆ ಹೋಗುತ್ತಿದ್ದರೆ, ಅದಕ್ಕೆ ತಕ್ಕಂತೆ ಬಟ್ಟೆ ಧರಿಸಿ. ಆದ್ರೆ ನೀವು ಧರಿಸುವ ಬಟ್ಟೆಯಿಂದ ನಿಮಗೆ ಇರುಸು ಮುರುಸಾಗಬಾರದು. ಯಾಕಂದ್ರೆ ಕೆಲವರು ಮಧುಮಗ ಮಧುಮಗಳಿಗಿಂತ ಸುಂದರವಾದ, ಝಗಮಗಿಸುವ ಬಟ್ಟೆ ಧರಿಸುತ್ತಾರೆ. ಅದನ್ನು ಕಂಡು ಹಲವರು ಆಡಿಕೊಳ್ಳುತ್ತಾರೆ. ಹಾಗಾಗಿ ನೀವು ಮದುವೆಗೆ ಹೋದವರಂತೆ ಬಟ್ಟೆ ಧರಿಸಬೇಕೇ ವಿನಃ, ಮಧುಮಕ್ಕಳಂತೆ ಅಲ್ಲ. ಇನ್ನು ಯಾರದ್ದಾದರೂ, ಶವಸಂಸ್ಕಾರಕ್ಕೆ ಹೋಗಬೇಕಾದರೂ ಕೂಡ, ಅದಕ್ಕೆ ತಕ್ಕಂತೆ ಸಿಂಪಲ್ಲಾಗಿರುವ ಬಟ್ಟೆ ಧರಿಸಿ.

ಕನಸಿನಲ್ಲಿ ಗೋವು ಕಾಣಿಸುವುದು ಶುಭವೋ ..? ಅಶುಭವೋ..?

ಎರಡನೇಯ ನಿಯಮ ನಿಮಗೆ ಸೂಟ್ ಆಗುವಂಥ ಬಟ್ಟೆ ಧರಿಸಿ. ಕೆಲವರು ತೋರಿಕೆಗೋಸ್ಕರ ಅವರ ಯೋಗ್ಯತೆಗಿಂತ ಹೆಚ್ಚು ದುಡ್ಡು ಕೊಟ್ಟು ಬಟ್ಟೆ ತೊಡುತ್ತಾರೆ. ಇದು ತಪ್ಪಲ್ಲ. ಆದ್ರೆ ನೀವು ಧರಿಸುವ ಉಡುಗೆಯಿಂದ ನಿಮ್ಮನ್ನು ಬೇರೆಯವರು ಆಡಿಕೊಳ್ಳಬಾರದು. ಉದಾಹರಣೆಗೆ ನೀವು ಯಾರ ಹತ್ರನಾದ್ರೂ ಸಾಲ ತೆಗೆದುಕೊಂಡಿರ್ತೀರಿ. ಸಾಲ ತೀರಿಸದಿದ್ದರೂ, ನೀವು ಹೆಚ್ಚು ಬೆಲೆಯ, ಬಟ್ಟೆಗಳನ್ನು ಖರೀದಿಸಿ ಧರಿಸುತ್ತೀರಿ. ಅಥವಾ ನಿಮಗೆ ಸರಿಯಾಗಿ ತಿನ್ನಲು ಅನ್ನವಿರೋದಿಲ್ಲಾ. ಆದ್ರೂ ಹೆಚ್ಚು ಬೆಲೆಯ ಬಟ್ಟೆ ಖರೀದಿಸುತ್ತೀರಿ.  ಆಗ ಜನ ನಿಮ್ಮ ಬಗ್ಗೆ ಕೆಟ್ಟದಾಗಿ ಆಡಿಕೊಳ್ಳುತ್ತಾರೆ. ಹಾಗಾಗಿ ನಿಮ್ಮ ಯೋಗ್ಯತೆಗೆ ತಕ್ಕಂತೆ ಬಟ್ಟೆ ಧರಿಸಿ.

ಸೂರ್ಯಾಸ್ತದ ಬಳಿಕ ಈ 4 ವಸ್ತುವನ್ನು ಎಂದಿಗೂ ದಾನ ಮಾಡಬೇಡಿ..

ಮೂರನೇಯ ನಿಯಮ, ವಯಸ್ಸಿಗೆ ತಕ್ಕಂತೆ ಬಟ್ಟೆ ಧರಿಸಿ. ಉದಾಹರಣೆಗೆ ನಿಮಗೆ ವಯಸ್ಸು 50 ದಾಟಿದೆ ಎಂದಿಟ್ಟುಕೊಳ್ಳಿ. ಆದರೂ ನೀವು ಸ್ಕರ್ಟ್ಸ್, ಮಾಡರ್ನ್ ಡ್ರೆಸ್ ಧರಿಸಿದ್ದಲ್ಲಿ, ಇತರರು ನಿಮ್ಮ ಬಗ್ಗೆ ಆಡಿಕೊಳ್ಳುತ್ತಾರೆ. ಹಾಗಾಗಿ ಸ್ತ್ರೀಯಾಗಲಿ, ಪುರುಷರಾಗಲಿ ತಮ್ಮ ವಯಸ್ಸಿಗೆ ತಕ್ಕ ಹಾಗೆ ಬಟ್ಟೆ ಧರಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss