ನಮ್ಮ ಮುಖದ ಹೊಳಪು ಹೆಚ್ಚಿಸೋದು ಹೇಗೆ..? ಮೊಡವೆ ಕಲೆ ಇರದಂತೆ ಯಾವ ಫೇಸ್‌ಪ್ಯಾಕ್ ಬಳಸಬೇಕು..? ನಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇರಿಸೋದು ಹೇಗೆ ಅನ್ನೋ ಬಗ್ಗೆ ನಾವಿವತ್ತು ತಿಳಿಸಲಿದ್ದೇವೆ.
ದೇಹದಲ್ಲಿ ಪಿತ್ತ ಜಾಸ್ತಿಯಾದಾಗ ಮುಖದಲ್ಲಿ ಮೊಡವೆಗಳಾಗುತ್ತದೆ. ಹೆಚ್ಚು ಉಷ್ಣ ಪದಾರ್ಥ, ಕರಿದ ತಿಂಡಿಗಳನ್ನು ತಿನ್ನುವುದರಿಂದ, ಕಡಿಮೆ ನೀರು ಕುಡಿಯುವುದರಿಂದ ನಮ್ಮ ಮುಖದ ಕಾಂತಿ ಕಳೆದು ಹೋಗುತ್ತದೆ. ಹಾಗಾಗಿ ನಾವು ಹೆಚ್ಚು ಕರಿದ ಪದಾರ್ಥಗಳನ್ನು ತಿನ್ನಬಾರದು. ನೀರಿನಂಶ ಹೆಚ್ಚಾಗಿರುವ ಹಣ್ಣು, ತರಕಾರಿ ತಿನ್ನಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು. ನಿಮಗೆ ಸಾಧ್ಯವಾದಲ್ಲಿ ನೀವು ದಿನಕ್ಕೆ 2ರಿಂದ 3 ಲೀಟರ್ ನೀರು ಕುಡಿಯಿರಿ. ಮತ್ತು ಸಂಪೂರ್ಣವಾಗಿ ಪಥ್ಯ ಮಾಡಿ. ಒಂದು ತಿಂಗಳು ಕರಿದ ಪದಾರ್ಥವನ್ನು ತಿನ್ನಬೇಡಿ. ಖಾರಾ ತಿಂಡಿಯನ್ನ ತಿನ್ನಬೇಡಿ. ಮಾಂಸಾಹಾರ ತ್ಯಜಿಸಿ. ಬರೀ ಚಪ್ಪೆ ಆಹಾರ ಸೇವಿಸಿ. ಮುಖಕ್ಕೆ ಯಾವ ಫೇಸ್‌ಪ್ಯಾಕ್, ಫೇಸ್‌ಮಾಸ್ಕ್ ಕೂಡ ಬೇಡ, ತನ್ನಿಂದ ತಾನೇ ನಿಮ್ಮ ಮುಖದಲ್ಲಿ ಕಾಂತಿ ಬರುತ್ತದೆ.
ಆದ್ರೆ ದಿನಕಕ್ಕೆ 2ರಿಂದ 3 ಲೀಟರ್ ನೀರು ಕುಡಿಯುವಷ್ಟು ಪುರಸೊತ್ತು ಯಾರಿಗೂ ಇಲ್ಲ. ಹಾಗಾಗಿ ಇಂದು ನಾವು ಡ್ರೈ ಸ್ಕಿನ್, ಆಯ್ಲಿ ಸ್ಕಿನ್, ಮೊಡವೆ ಇದ್ದರೆ ಯಾವ ಯಾವ ಫೇಸ್ ಪ್ಯಾಕ್ ಹಾಕಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಕೆಲ ನ್ಯಾಚುರಲ್ ಕ್ಲೆನ್ಸರ್‌ಗಳ ಬಗ್ಗೆ ತಿಳಿಯೋಣ. ರೋಸ್‌ವಾಟರ್, ಆ್ಯಲೋವೆರಾ ಜೆಲ್, ಸೌತೆಕಾಯಿಯ ಪೇಸ್ಟ್ ಇವುಗಳಲ್ಲಿ ಯಾವುದಾದರೂ ಒಂದನ್ನು ಕ್ಲೆನ್ಸರ್‌ಗಳಂತೆ ಬಳಸಿ. ಇದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಅಂಗಡಿಯಲ್ಲಿ ಸಿಗುವ ಕ್ಲೆನ್ಸರ್‌ಗಳಿಗಿಂತ ಇವು ಬೆಸ್ಟ್.
ಇನ್ನು ಬ್ಯೂಟಿಪಾರ್ಲರ್‌ಗೆ ಹೋಗಿ ಹಣ ಖರ್ಚು ಮಾಡಿ, ಫೇಸ್‌ಪ್ಯಾಕ್ ಹಾಕುವ ಬದಲು ಮನೆಯಲ್ಲೇ ಹರ್ಬಲ್ ಫೇಸ್‌ಪ್ಯಾಕ್ ಬಳಸಿ. ನಾರ್ಮಲ್ ಸ್ಕಿನ್ ಇದ್ದವರು ಕಡಲೆ ಹಿಟ್ಟು, ಬೇವಿನ ಎಲೆಯ ಪೌಡರ್, ಚಂದನದ ಪೌಡರ್ ಈ ಮೂರನ್ನು ಮಿಕ್ಸ್ ಮಾಡಿ, ಫೇಸ್‌ಪ್ಯಾಕ್ ಹದಕ್ಕೆ ಕಲೆಸಿ, ಫೇಸ್‌ಪ್ಯಾಕ್ ಹಾಕಿ. 15 ನಿಮಿಷದ ಬಳಿಕ, ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಫೇಸ್ ವಾಶ್ ಮಾಡಿ. ಕೆಲವರಿಗೆ ಕಡಲೆ ಹಿಟ್ಟು ಬಳಸಿದ್ರೆ ಅಲರ್ಜಿಯಾಗುತ್ತದೆ. ಅಂಥವರು ಮುಲ್ತಾನಿ ಮಿಟ್ಟಿಯನ್ನ ಬಳಸಿ.
ಆಯ್ಲಿ ಸ್ಕಿನ್ ಇದ್ದವರು ಕೂಡ ಈ ಫೇಸ್‌ಪ್ಯಾಕ್ ಬಳಸಬಹುದು. ಇನ್ನು ನಿಮ್ಮದು ಒಣಗಿನ ತ್ವಚೆಯಾಗಿದ್ದರೆ, ನೀವು ಮುಖಕ್ಕೆ ಆಲಿವ್ ಆಯ್ಲನಿಂದ ವಾರಕ್ಕೊಮ್ಮೆ ಮಸಾಜ್ ಮಾಡಿಕೊಳ್ಳಿ. ಮತ್ತು ಪಪಾಯಾ ಫೇಸ್ ಪ್ಯಾಕ್ ಹಾಕಿ. ನಾಲ್ಕು ಪಪಾಯಾ ತುಂಡನ್ನು ಮ್ಯಾಶ್ ಮಾಡಿಕೊಂಡು, ಅದಕ್ಕೆ ಎರಡು ಸ್ಪೂನ್ ಜೇನುತುಪ್ಪ, ಮತ್ತು ಎರಡು ಸ್ಪೂನ್ ಹಾಲು ಹಾಕಿ ಫೇಸ್‌ಪ್ಯಾಕ್ ತಯಾರಿಸಿಕೊಳ್ಳಿ. ಇದನ್ನು ಹಚ್ಚಿಕೊಂಡು 15 ನಿಮಿಷ ಬಿಟ್ಟು, ಉಗುರು ಬೆಚ್ಚು ನೀರಿನಿಂದ ನಿಮ್ಮ ಫೇಸ್ ವಾಶ್ ಮಾಡಿ.
ಇವಿಷ್ಟು ಫೇಸ್‌ಪ್ಯಾಕ್ ಹಾಕುವುದರ ಜೊತೆಗೆ ನೀವು ಹಣ್ಣು ಹಂಪಲಿನ ಸೇವನೆ ಮಾಡಿ. ಡ್ರೈಫ್ರೂಟ್ಸ್, ತುಪ್ಪ, ಮೊಸರು, ಎಳನೀರಿನ ಸೇವನೆ ಮಾಡಿ. ಹೆಚ್ಚೆಚ್ಚು ನೀರು ಕುಡಿಯಿರಿ. ಕೆಮಿಕಲ್ ಇರುವ ಪ್ರಾಡಕ್ಟ್‌ಗಳನ್ನು ಆದಷ್ಟು ಅವೈಡ್ ಮಾಡಿ. ಇನ್ನು ನಾವು ಹೇಳಿರುವ ಆಹಾರ ತೆಗೆದುಕೊಂಡಲ್ಲಿ ಅಥವಾ ನಾವು ಹೇಳಿರುವ ಫೇಸ್‌ಪ್ಯಾಕ್ ಬಳಕೆ ಮಾಡಿದ್ದಲ್ಲಿ ಅಲರ್ಜಿ ಎಂದಾದ್ದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ ನಂತರ ಬಳಸುವುದು ಉತ್ತಮ.