Dharwad News: ಧಾರವಾಡ: ಸಂಶೋಧನಾ ಸಂಸ್ಥೆಗಳ ನಡುವೆ ಸಹಯೋಗವನ್ನು ಬೆಳೆಸಲು ಧಾರವಾಡದ ಐಐಟಿ ಮತ್ತು ಜರ್ಮನ್ ಅಕಾಡೆಮಿಕ್ ಎಕ್ಸ್‌ಚೇಂಜ್ ಸರ್ವಿಸ್ ನಡುವೆ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಲಾಯಿತು.
ದೆಹಲಿಯಲ್ಲಿರುವ ಜರ್ಮನಿಯ ರಾಯಭಾರಿ ಕಚೇರಿಯಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮತ್ತು DAAD ಉಪ-ಪ್ರಧಾನ ಕಾರ್ಯದರ್ಶಿ ಡಾ.ಮೈಕೆಲ್ ಹಾರ್ಮ್ಸ್ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ವೆಂಕಪ್ಪಯ್ಯ ದೇಸಾಯಿ, ಒಡಂಬಡಿಕೆಯ ಅಡಿಯಲ್ಲಿ ಸಂಶೋಧನೆ ಮತ್ತು ಉಪನ್ಯಾಸ ಚಟುವಟಿಕೆಗಳಿಗಾಗಿ ಅಧ್ಯಾಪಕರ ವಿನಿಮಯ ಕಾರ್ಯಕ್ರಮಕ್ಕಾಗಿ ಐಐಟಿ ಧಾರವಾಡ ಮತ್ತು ಜರ್ಮನ್ ವಿಶ್ವವಿದ್ಯಾಲಯಗಳಿಂದ ಅಧ್ಯಾಪಕರನ್ನು ಆಹ್ವಾನಿಸಬಹುದು. ಎರಡೂ ದೇಶಗಳ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರದ ಪರಸ್ಪರ ಪ್ರಯೋಜನವನ್ನು ಗುರುತಿಸುವ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿರುವ ಜರ್ಮನ್ ಅಕಾಡೆಮಿಕ್ ಎಕ್ಸ್‌ಚೇಂಜ್ ಸರ್ವಿಸ್ಸಿನೊಂದಿಗಿನ ಈ ಒಡಂಬಡಿಕೆ ಪ್ರವೇಶಿಸಲು ಖುಷಿ ತಂದಿದೆ ಎಂದರು.
ಭಾರತ ಮತ್ತು ಜರ್ಮನಿ ಎರಡೂ ವೈಜ್ಞಾನಿಕ ಮತ್ತು ಸಂಶೋಧನಾ ಪ್ರತಿಭೆಗಳ ಶಕ್ತಿ ಕೇಂದ್ರಗಳಾಗಿವೆ. ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮತ್ತು ಈ ಒಪ್ಪಂದವು ಅಧ್ಯಾಪಕರ ಅರ್ಥಪೂರ್ಣ ವಿನಿಮಯಕ್ಕೆ ದಾರಿ ಮಾಡಿಕೊಡುತ್ತದೆ. ಇದು ಪರಸ್ಪರ ಪ್ರಯೋಜನಕಾರಿಯಾಗಿದೆ ಎಂದರು.
Market : ವರ್ಷವಾದರು ಹಂಚಿಕೆಯಾಗದ ಮಾರುಕಟ್ಟೆ ಮಳಿಗೆ : ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ವ್ಯಾಪಾರಿಗಳು
ಕಲಬುರಗಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ: CID ತನಿಖೆ ಮಾಡುತ್ತಾರೆ ಎಂದ ಗೃಹಸಚಿವರು..