Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಬೆಲೆ ಕಡಿಮೆಯಾದಾಗ ಯಾವುದೇ ವಸ್ತುವಿಗೆ ಇರುವ ಬೇಡಿಕೆ ಹೇಗೆ ಕುಸಿಯುತ್ತದೆ ಅನ್ನೋ ಬಗ್ಗೆ ಮಾತನಾಡಿದ್ದಾರೆ.
ರಿಲಯನ್ಸ್ ಸೆಲ್ ಫೋನ್ ಬಂದಾಗ, 21ಸಾವಿರಕ್ಕೆ ಲಾಂಚ್ ಆಗಿತ್ತು. ಬಳಿಕ ಅದರ ಬೆಲೆ 6ರಿಂದ 7 ಸಾವಿರಕ್ಕೆ ಇಳಿಯಿತು. ಆಮೇಲೆ ಬಡವರೂ ಸೆಲ್ ಫೋನ್ ಖರೀದಿಸಲಿ ಎಂದು 501 ರೂಪಾಯಿಗೆ ಆ ಸೆಲ್ ಫೋನ್ ಮಾರಲಾಯಿತು. ಆದರೆ ಅದನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ. ಏಕೆಂದರೆ, ಅದು ಬಡವರ ಸೆಲ್ ಫೋನ್ ಆಗಿ ಬದಲಾಯಿತು. ಮತ್ತೆ ಯಾವ ಮನುಷ್ಯನೂ ತಾನು ಬಡವ ಎಂದು ತೋರಿಸಿಕ`ಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ಅದರ ಬೆಡಿಕೆಯೂ ಕುಸಿಯಿತು. ಈ ರೀತಿ ನಾವು 1 ಸಲ ಸೋತರೆ ಅದರಿಂದ ಹಲವು ವಿಷಯಗಳನ್ನು ಕಲಿಯುತ್ತೇವೆ ಅಂತಾರೆ ಸುಭಾಷ್.
ಅದೇ ರೀತಿ ಸುಭಾಷ್ ಚಂದ್ರ ಅವರು ಸಿಡಿಎಂಎ ಮತ್ತು ಜಿಎಸ್ಎಂಎ ಓವ್ನ್ ಬ್ರ್ಯಾಂಡ್ ಲಾಂಚ್ ಮಾಡಿದ್ದರು. ಅದರಲ್ಲಿ ಸುಭಾಷ್ ಅವರು ನಷ್ಟ ಕಂಡಿದ್ದರು. ಆ ಬಗ್ಗೆ ಅವರೇ ವಿವರಿಸಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




