Wednesday, October 15, 2025

Latest Posts

ಮನೆ ಹಂಚಿಕೆ ಲೋಪ: ಕ್ರಮಕ್ಕೆ ಒತ್ತಾಯ ಮಾಡಿದ ಮಾಜಿ ಶಾಸಕ ಎಂ.ಎ ಗೋಪಾಲಸ್ವಾಮಿ

- Advertisement -

ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ಮನೆಗಳ ಹಂಚಿಕೆಯಲ್ಲಿ ಲೋಪ ಎಸಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ.ಬಿ ಸುನಿಲ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.

ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಇಂಥ ಸೂಚನೆಗಳನ್ನು ಕಾಗೆ ನೀಡುತ್ತೆ ..

ಎಂ ಎ ಗೋಪಾಲಸ್ವಾಮಿ ಮಾತನಾಡಿ ಗ್ರಾಮ ಸಭೆ ನಡೆಸಿ ಮನೆಗಳನ್ನು ಹಂಚಿಕೆ ಮಾಡುತ್ತಿಲ್ಲ, ಪಿಡಿಒಗಳು ಅಸಡ್ಡೆಯಿಂದ ವರ್ತಿಸುತ್ತಾರೆ, ಅರ್ಹರಿಗೆ ಮನೆ ತಲುಪಿಸಬೇಕು ಎಂದರು, ನರೇಗಾ ಯೋಜನೆಯಲ್ಲಿ ತಾಲೂಕಿನಲ್ಲಿ 35 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು ಹಣ ದುರುಪಯೋಗ ವಾಗಿರುವುದನ್ನು ತಡೆಯಬೇಕು, ಬಾಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ, ಕೆಲಸವೇ ಆಗದೆ 10 ಲಕ್ಷ ಬಿಲ್ ಪಾವತಿಸಲಾಗಿದೆ, ತಪ್ಪಿತಸ್ಥರಿಂದ 1.50 ಲಕ್ಷ ದಂಡ ವಸೂಲಿ ಮಾಡಲಾಗಿದೆ, ಉಳಿದ 8.50 ಲಕ್ಷವನ್ನು ವಸೂಲಿ ಮಾಡಿಲ್ಲ ಎಂದು ದೂರಿದರು.

ಗೌಡಗೆರೆಯಲ್ಲಿ ಎರಡು ಕೆರೆಗಳನ್ನು ದುರಸ್ತಿ ಮಾಡದಿದ್ದರೆ ಕೆರೆ ಒಡೆದು ಹೋಗುವ ಸಾಧ್ಯತೆ ಇದೆ ಕೂಡಲೇ ದುರಸ್ತಿಗೆ ಕ್ರಮ ತೆಗೆದುಕೊಳ್ಳಬೇಕು, ಶ್ರವಣಬೆಳಗೊಳ ಪಂಚಾಯಿತಿಯಲ್ಲೂ ದುರುಪಯೋಗವಾಗಿದೆ. ಕಟ್ಟಿಗೆಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಪೂಜೆಗೆ ಕರೆಯಲಿಲ್ಲ ಎಂಬ ಉದ್ದೇಶದಿಂದ ಶಾಸಕ ಸಿ.ಎನ್ ಬಾಲಕೃಷ್ಣ ಕೆಲಸ ನಿಲ್ಲಿಸುವಂತೆ ಮಾಡಿದ್ದಾರೆ. 35 ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ಮಾಡುವಂತೆ ಗ್ರಾಮೀಣ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಲಾಗಿದೆ ಎಂದರು.

ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ನೀವು ಮಾಡುವ ಈ 5 ತಪ್ಪುಗಳೇ ಕಾರಣ..

ಮನವಿ ಸ್ವೀಕರಿಸಿದ ಡಿ. ಬಿ. ಸುನೀಲ್‌ ಕುಮಾರ್ ಮಾತನಾಡಿ ಗ್ರಾಮ ಸಭೆ ನಡೆಸಿ ಮನೆ ಹಂಚಬೇಕು, ಗೌಡಗೆರೆ ಕೆರೆಯನ್ನು ದುರಸ್ತಿ ಮಾಡಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಸಿ.ಎಸ್‌ ಪಟ್ಟೇಗೌಡ, ಸಿ.ಎಸ್. ಜಯರಾಂ, ಸಿ.ಎಸ್, ಯುವರಾಜ್, ಮಿಲ್ಟ್ರಿ ಮಂಜು, ಸೇರಿದಂತೆ ಇತರರು ಹಾಜರಿದ್ದರು.

- Advertisement -

Latest Posts

Don't Miss