Bollywood News: ಪೂನಂ ಪಾಂಡೆಗೆ ಗರ್ಭಕಂಠದ ಕ್ಯಾನ್ಸರ್ ಇದ್ದು, ಆಕೆ ನಮ್ಮನ್ನೆಲ್ಲ ಇಂದು ಅಗಲಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಪೂನಂ ಪಾಂಡೆ ವಿರುದ್ಧ ಕೇಸ್ ದಾಖಲಾಗಿದೆ.
ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಪೂನಂ ಈ ರೀತಿ ತನ್ನ ಸಾವಿನ ಸುದ್ದಿ ಹಬ್ಬಿಸಿ, ಮರುದಿನ ಇನ್‌ಸ್ಟಾಗ್ರಾಮ್‌ನ ವೀಡಿಯೋದಲ್ಲಿ ಪ್ರತ್ಯಕ್ಷಳಾಗಿ, ನಾನು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದೆ, ನನ್ನ ಸಾವಿನ ಸುದ್ದಿ ಹರಡಿಸಿದ್ದರ ಬಗ್ಗೆ ನಗೆ ಗರ್ವವಿದೆ. ನಾನು ಯಾರಿಗಾದರೂ ಹರ್ಟ್ ಮಾಡಿದ್ದರೆ, ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು.
ಈಕೆಯ ಈ ವಿಚಿತ್ರ ಜಾಗೃತಿ ಮೂಡಿಸುವ ರೀತಿಗೆ, ಈಗ ಪೂನಂ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬರೀ ಪೂನಂ ವಿರುದ್ಧ ಮಾತ್ರವಲ್ಲದೇ, ಇನ್‌ಸ್ಟಾದಲ್ಲಿ ಸುಳ್ಳು ಸಾವಿನ ಸುದ್ದಿ ಹಾಕಿದ್ದ ಆಕೆಯ ಮ್ಯಾನೇಜರ್ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಅಲಿಕಾಶಿಪ್ ಅನ್ನೋ ವಕೀಲರು ಈ ಬಗ್ಗೆ ನೀಡಿದ ದೂರಿನ ಮೇರೆಗೆ, ಪೂನಂ ಮತ್ತು ಆಕೆಯ ಮ್ಯಾನೇಜರ್ ವಿರುದ್ಧ ದೂರು ದಾಖಲಿಸಲಾಗಿದೆ.
ಇನ್ನು ಪೂನಂ ಮಾಡಿದ ಈ ಕೆಲಸಕ್ಕೆ ಎಲ್ಲರೂ ಆಕ್ರೋಶ ಹೊರಹಾಕಿದ್ದರೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ, ಪೂನಂ ಮಾಡಿದ ಕೆಲಸ ಉತ್ತಮವಾಗಿದ್ದು, ಅವರು ಈ ರೀತಿ ಜಾಗೃತಿ ಮೂಡಿಸಲು ಸುಳ್ಳು ಹೇಳಿದ್ದಲ್ಲಿ ತಪ್ಪಿಲ್ಲವೆಂದು ಹೇಳಿದ್ದಾರೆ. ಅಲ್ಲದೇ ಪೂನಂಗೆ ಮತ್ತಷ್ಟು ಆಯುಷ್ಯ ಹೆಚ್ಚಲಿ ಎಂದು ವಿಶ್ ಮಾಡಿದ್ದರು.
ವಿಜಯೇಂದ್ರ ಬದಲು ಯತೀಂದ್ರ ಹೆಸರು: ಭಾಷಣದುದ್ದಕ್ಕೂ ಸಚಿವ ಸಂತೋಷ್ ಲಾಡ್ ಯಡವಟ್ಟು
ರಾಜ್ಯಕ್ಕೆ ಅನ್ಯಾಯವಾಗಿದರೂ ಒಬ್ಬ ಸಂಸದರೂ ಧ್ವನಿ ಎತ್ತಿಲ್ಲ- ಡಿಸಿಎಂ ಡಿ.ಕೆ.ಶಿವಕುಮಾರ್..!
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್