Thursday, May 16, 2024

Latest Posts

ಬೆಳಕಿಗೆ ಬಂತು ಮತ್ತೊಂದು ನಕಲಿ ಐಪಿಎಲ್ ಟೂರ್ನಿ: ಉ.ಪ್ರದೇಶದ ಮೀರತ್‍ನಲ್ಲಿ  ಭಾರೀ ಬೆಟ್ಟಿಂಗ್ ದಂಧೆ

- Advertisement -

ಮೀರತ್: ಗುಜರಾತ್‍ನಲ್ಲಿ ನಕಲಿ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆದ ಬೆನ್ನಲ್ಲೆ ಉತ್ತರಪ್ರದೇಶದಲ್ಲೂ ನಕಲಿ ಐಪಿಎಲ್ ಕ್ರಿಕೆಟ್ ಪತ್ತೆಯಾಗಿದೆ.

ಉತ್ತರ ಪ್ರದೇಶದ ಹಾಪುರದಲ್ಲಿ  ಐಪಿಎಲ್ ಮಾದರಿಯ ಬಿಗ್ ಬ್ಯಾಶ್ ಪಂಜಾಬ್ ಟಿ20 ಲೀಗ್ ನಡೆಯುತ್ತಿತ್ತು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಟೂರ್ನಿ ಆಯೋಜಕರು ಯೂಟ್ಯೂಬ್ ಚಾನಲ್ ಮೂಲಕ ಸ್ಥಳಿಯ ಯುವಕರನ್ನು ರಣಜಿ ಆಟಗಾರರೆಂದು ಪರಿಚಯಿಸಿ ಅವರಿಂದ ಪ್ರತಿ ಪಂದ್ಯಕ್ಕೆ 30ರಿಂದ 40 ಸಾವಿರ ರೂ. ಹಣ ಪಡೆದು ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಆಯೋಜಕರು ರಷ್ಯಾ ಮೂಲದವರೆಂದು ತಿಳಿದು ಬಂದಿದ್ದು  ಕ್ರಿಕ್ ಹೀರೋಸ್ ಹೆಸರಿನ ಆ್ಯಪ್‍ನಲ್ಲಿ  ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಈ ಬೆಟ್ಟಿಂಗ್ ದಂಧೆಗೆ ಬೇರೆ ದೇಶಗಳಿಂದಲೂ ಆಹ್ವಾನಿಸಲಾಗಿತ್ತು ಎಂದು ತಿಳಿದು ಬಂದಿದೆ.

ಪ್ರಕರಣ ಸಂಬಂಧ ಹಾಪುರ ಪೊಲೀಸರು ಮೀರತ್‍ನ ಶಾಬು ಅಹಮದ್ ಮತ್ತು ಗ್ವಾಲಿಯರ್‍ನ ರಿಷಬ್ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ.

ಮೀರತ್‍ನ ಸುಧಾ ಕ್ರಿಕೆಟ್ ಮೈದಾನದಲ್ಲಿ ನಕಲಿ ಟಿ20 ಟೂರ್ನಿ ನಡೆಯುತ್ತಿತ್ತು ಇದಕ್ಕೂ ಮುನ್ನವೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಆಯೋಜಕರು ಮೀರತ್‍ನ ಶಾಲೆಯ ಮೈದಾನವನ್ನು ಟೂರ್ನಿ ಆಡಿಸಲು ಯೋಜನೆ ರೂಪಿಸಿದ್ದರು ಅಂದು ತಿಳಿದು ಬಂದಿದೆ.

ಟೂರ್ನಿ ಆಯೋಜಕರಾದ ಎಫಿಮೊವ್, ಆಸಿಫ್ ಮೊಹ್ಮದ್ ಪೊಲೀಸರು ಮತ್ತು ಅಶೋಕ್ ಚೌಧರಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಇವರ ಪೈಕಿ ಮೊಹ್ಮದ್ ಮತ್ತು ಚೌಧರಿ ಗುಜರಾತ್‍ನ ಐಪಿಎಲ್ ಬೆಟ್ಟಿಂಗ್ ಪ್ರರಕಣ ಆರೋಪಿಗಳಾಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಇದೀಗ ಉತ್ತರ ಪ್ರದೇಶ ಪೊಲೀಸರು ಹಾಪುರ್ ಲೀಗ್ ಮತ್ತು ಆರೋಪಿಗಳು ಪಾಕಿಸ್ಥಾನಕ್ಕೆ ಯಾಕೆ ಕರೆ ಮಾಡಿದ್ದರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss