Hubli News: ಹುಬ್ಬಳ್ಳಿ: ಫಕೀರ ಸಿದ್ದರಾಮ ಸ್ವಾಮೀಜಿಗಳ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆನೆ ಅಂಬಾರಿ ಮೆರವಣಿಗೆ ನಡೆಸಲಾಯಿತು. ಮೂರು ಸಾವಿರ ಮಠದಿಂದ ನಡೆದ ಮೆರವಣಿಯಲ್ಲಿ ಐದು ಆನೆ, ಐದು ಒಂಟೆ, ಐದು ಕುದುರೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಫಕೀರ ಸಿದ್ದರಾಮ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಮೂರು ಸಾವಿರ ಮಠದ ಮೂಜಗು ಸ್ವಾಮೀಜಿಗಳು ಸೇರಿ ಭಾವೈಕ್ಯತಾ ರಥಯಾತ್ರೆಯಲ್ಲಿ ನೂರಕ್ಕೂ ಹೆಚ್ಚು ಮಠಾಧೀಶರು ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಆನೆಯ ಮೇಲೆ ಅಂಬಾರಿ ಇರಿಸಿ ಸ್ವಾಮೀಜಿಯವರನ್ನು ಕೂರಿಸಿ ತುಲಾಭಾರ ಮಾಡಲಾಗುವುದು. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬೃಹತ್ ತಕ್ಕಡಿಯಲ್ಲಿ ತುಲಾಭಾರ ನಡೆಸಲಾಗುತ್ತಿದೆ. 5555 ಕೆಜಿ ತೂಕದ ಹತ್ತು ರೂಪಾಯಿ ನಾಣ್ಯಗಳಿಂದ ತುಲಾಭಾರ ಮಾಡಲಾಗುತ್ತಿದೆ. ಬಿ.ವೈ. ವಿಜಯೇಂದ್ರ, ಜಗದೀಶ್ ಶೆಟ್ಟರ್, ಬಸವರಾಜ ಹೊರಟ್ಟಿ, ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್‌ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ