Saturday, April 12, 2025

Latest Posts

ಟೆರರಿಸ್ಟ್‌, ಕಲ್ಲು ತೂರಾಟ ಮಾಡುವವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗವಿಲ್ಲ: ಅಮಿತ್ ಶಾ

- Advertisement -

National Political News: ಯಾರ್ಯಾರು ಭಯೋತ್ಪಾದಕ ಕೆಲಸಗಳನ್ನು ಮಾಡುತ್ತಾರೋ, ಮತ್ತು ಕಲ್ಲು ತೂರಾಟದಂಥ ಸಮಾಜಘಾತಕ ಕೆಲಸಗಳನ್ನು ಮಾಡುತ್ತಾರೋ, ಅವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದಿಲ್ಲವೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.

ಜಮ್ಮು-ಕಾಶ್ಮೀರವನ್ನು ಮತ್ತಷ್ಟು ಪ್ರಬಲಗೊಳಿಸಬೇಕು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಮಂದಿ ಭಯೋತ್ಪಾದಕರು, ಕಲ್ಲು ತೂರಾಟ ನಡೆಸುವವರು ಇದ್ದಿ, ಇಂಥವರಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ, ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇಂಥ ಕೆಲಸ ಮಾಡಿದವರ ಕುಟುಂಬಸ್ಥರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ.

ಇನ್ನು ಸರ್ಕಾರದ ಈ ನಿರ್ಧಾರದ ವಿರುದ್ಧ ಕೆಲವರು ಸುಪ್ರೀಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರೂ ಕೂಡ, ಕೊನೆಗೆ ಸರ್ಕಾರದ ನಿರ್ಧಾರವೇ ಸರಿ ಎಂದು ತೀರ್ಪು ಬಂದಿದೆ. ಹಾಗಾಗಿ ಕಾಶ್ಮೀರದಲ್ಲಿ ಶಾಂತಿ ಕದಡುವ ಕೆಲಸ ಮಾಡಿದವರಿಗೆ, ಎಲ್ಲ ಸೌಕರ್ಯ ಬ್ಯಾನ್ ಮಾಡಲಾಗುವುದು. ಅವರ ಕುಟುಂಬಸ್ಥರಿಗೆ ಯಾರಿಗೂ ಸರ್ಕಾರಿ ಕೆಲಸ ಸಿಗದ ಹಾಗೆ ಮಾಡಲಾಗುತ್ತದೆ ಎಂದು ಅಮಿತ್ ಷಾ ಹೇಳಿದ್ದಾರೆ.

Political News: ರಾಹುಲ್ ಗಾಂಧಿ ಎಂಟ್ರಿ ಕೊಡುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ

ಸಿಐಡಿ ಡಿಜಿ ಎಂ ಸಲೀಂ ಆಗಮನ – ಅಂಜಲಿ ಹಂತಕ ವಿಶ್ವನ ವಿಚಾರಣೆ ಸಾಧ್ಯತೆ

Israel war: ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಮಕ್ಕಳು ಸೇರಿ 35 ಮಂದಿ ಸಾವು

- Advertisement -

Latest Posts

Don't Miss