Saturday, February 15, 2025

Latest Posts

ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆಗೆ ಶರಣಾದ ವೈಧ್ಯೆ ಗೀತಾ..!

- Advertisement -

ಗದಗ: ಇಲ್ಲಿಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ)ದ ವೈದ್ಯಾಧಿಕಾರಿಯಾಗಿದ್ದ ಡಾ. ಗೀತಾ ಅವರು ತಾಲೂಕಿನ ಹುಲಕೋಟಿಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಡಾ.ಗೀತಾ ಎಂಬಿಬಿಎಸ್‌ ಓದಿದ್ದರೆ, ಪತಿ ಡಾ. ಕುಶಾಲ್ ಕೋರಿ ಬಿಎಎಂಎಸ್ ವೈದ್ಯರಾಗಿದ್ದು, ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಆಯುಷ್‌ ವೈದ್ಯಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಗೀತಾ ಹಾಗೂ ಡಾ. ಕುಶಾಲ್ ಇಬ್ಬರೂ ಸ್ನೇಹಿತರು. ಇಬ್ಬರೂ ಪರಸ್ಪರ ಪ್ರೀತಿಸಿ ಬಳಿಕ ಮದುವೆಯಾಗಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಇತ್ತೀಚೆಗೆ ಇಬ್ಬರ ನಡುವೆ ವಿರಸ ಉಂಟಾಗಿತ್ತು. ಹೀಗಾಗಿ ನಿತ್ಯವೂ ಗಂಡ ಹೆಂಡತಿ ನಡುವೆ ಜಗಳ ಆಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಡಾ. ಗೀತಾ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸಾವಿನ ಸುದ್ದಿ ತಿಳಿದು ಗೀತಾ ಕುಟುಂಬಸ್ಥರು ಹುಲಕೋಟಿಗೆ ದೌಡಾಯಿಸಿದ್ದಾರೆ. ಮಗಳ ಸಾವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು, ಮಗಳ ಸಾವಿಗೆ ಪತಿ ಡಾ. ಕುಶಾಲ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸರು ತನಿಖೆ ನಡೆಸಿದ್ದಾರೆ.

Sheep: ದೇವಸ್ಥಾನದ ಬಳಿ ಕುರಿ ಬಲಿ ನೀಡಿದ ಮೂವರ ವಿರುದ್ಧ ಎಫ್‌ಐಆರ್!

ಹುಲಿ ಉಗುರು : ಚಿಕ್ಕಮಗಳೂರಿನಲ್ಲಿ ಅರಣ್ಯಾಧಿಕಾರಿ ಮೇಲೆಯೇ ದೂರು..

ಜಾತ್ರಾ ಮೆರವಣಿಗೆ ವೇಳೆ ಗಲಾಟೆ, ಪೊಲೀಸರ ಮೇಲೆ ಕಲ್ಲು ತೂರಾಟ..!

- Advertisement -

Latest Posts

Don't Miss