political news
ಹೌದು ವಿಕ್ಷಕರೆ ಹೆಂಡತಿ ಬೆಳಿಗ್ಗೆ ಬೇಗ ಏಳುವುದಿಲ್ಲವೆಂದು ಪತಿ ಬಸವನಗುಡಿ ಪೋಲಿಸ್ ಠಾಣೆಯಲ್ಲಿ ಕಂಪ್ಲೆಂಟ್ ಕೊಟ್ಟಿದ್ದಾನೆ.
ಯೆಸ್ ಕಮ್ರಾನ್ ಖಾನ್ ಇನ್ನುವ ವ್ಯಕ್ತಿ ತನ್ನ ಪತ್ನಿ ಆಯೇಷಾ ವಿರುದ್ದ ದೂರನ್ನು ದಾಖಲಿಸಿದ್ದಾನೆ.ಕಳೆದ ಐದು ವರ್ಷಗಳಿಂದ ಆಯೇಷಾ ನನ್ನ ಮೇಲೆ ಹಿಂಸೆ ಮಾಡುತಿದ್ದಾಳೆ ಎಂದು ದೂರು ನೀಡಿದ್ದಾನೆ.ರಾತ್ರಿ ತಡವಾಗಿ ಮಲಗುತ್ತಾಳೆ ಮಧ್ಯಾನ 12.30 ಎದ್ದೇಳುತ್ತಾಳೆ. ಮತ್ತೆ ಸಾಯಂಕಾಲ 6.00 ಗಂಟೆಗೆ ಮಲಗಿ ರಾತ್ರಿ 9.30 ಕ್ಕೆ ಏಳುತ್ತಾಳೆ.ನನ್ನ ತಾಯಿಗೆ ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದಾಳೆ. ಅದರೂ ಅವರೇ ಮನೆ ಕೆಲಸವನ್ನು ತಾವೇ ಮಾಡುತ್ತಾರೆ. ಇದರ ಬಗ್ಗೆ ಪ್ರಶ್ನೆ ಮಾಡಿದರೆ ಹೆದರಿಕೆ ಹಾಕುತ್ತಾಳೆ ತನ್ನ ಮನೆಯವರನ್ನ ಕರೆಸಿ ಗಲಾಟೆ ಮಾಡಿಸುತ್ತಾಳೆ. ಕೆಲವು ದಿನಗಳ ಹಿಂದೆ ಹುಟ್ಟಿದ ದಿನವನ್ನು ಆಚರಿಸಿಕೊಂಡಳು. ಆ ಸಮಯದಲ್ಲಿ ಇಪ್ಪತೈದು ಜನರನ್ನು ಮನೆಗೆ ಕರೆಸಿಕೊಂಡು ಬಂದು ನನ್ನ ಮೇಲೆ ಹಲ್ಲೆ ಮಾಡಿಸಿದ್ದಾಳೆ. ಅವಳಿಗೆ ನನ್ನ ಮೇಲೆ ಯಾವುದೇ ರೀತಿಯಅಗಿ ಪ್ರೀತಿ ಇಲ್ಲ ನನ್ನ ಆಸ್ತಿ ಕಬಳಿಕೆಗೆ ಹೊಂಚು ಹಾಕುತಿದ್ದಾರೆ.
ಅವಳಿಗೆ ಈ ಮೊದಲೆ ಖಾಯಿಲೆ ಇದೆ ಅದನ್ನು ನನಗೆ ತಿಳಿಸದೆ ಮರೆಮಾಚಿ ಮದುವೆ ಮಾಡಿಸಿ ನನಗೆ ಮೋಸ ಮಾಡಿದ್ದಾರೆ.ಹೆಂಡತಿಯಿಂದ ನನ್ನ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ತುಂಬಾ ಕಿರುಕುಳ ಅನುಭವಿಸುತಿದ್ದೇವೆ.ಪ್ರತಿ ದಿನ ನನ್ನ ಕುಟುಂಬ ನರಕಯಾತನೆಯನ್ನು ಅನುಭವಿಸುತ್ತಿದೆ. ದಯವಿಟ್ಟು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.