Wednesday, July 2, 2025

Latest Posts

ಫೇಮಸ್ ನ್ಯೂಸ್ ಆ್ಯಂಕರ್ ಈಗ ಬಿದಿ ಬದಿಯ ತಿಂಡಿ ವ್ಯಾಪಾರಿ…

- Advertisement -

ಇಂದು ನಾವು ರಾಜನಂತಿದ್ದರೂ, ಮುಂದೊಂದು ದಿನ ಹಣೆಬರಹ ಬದಲಾಗಿ ನಾವು ಬೀದಿಗೆ ಬರಬಹುದು. ಅಂತೆಯೇ, ಇಂದು ಹೊಟ್ಟೆಗೆ ಹಿಟ್ಟಿಲ್ಲದವರು, ಮುಂದೊಂದು ದಿನ ಬಂಗಲೆಯಲ್ಲಿ ಜೀವನ ಮಾಡಬಹುದು. ಮನುಷ್ಯನ ಹಣೆ ಬರಹ ಹೇಗೆ ಬೇಕಾದರೂ ಬದಲಾಗಬಹುದು ಅನ್ನೋ ಬಗ್ಗೆ ನಾವು ಸುಮಾರು ಉದಾಹರಣೆಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ. ಅಂತೆಯೇ ಇಂದು ಹಲವು ಚಾನೆಲ್‌ಗಳಲ್ಲಿ ನ್ಯೂಸ್ ಆ್ಯಂಕರ್ ಆಗಿ ಕೆಲಸ ಮಾಡಿದ ವ್ಯಕ್ತಿಯೋರ್ವ, ಊಟಕ್ಕೆ ಗತಿ ಇಲ್ಲದೇ, ಮನೆಯವರನ್ನ ಸಾಕುವ ಸಲುವಾಗಿ ಬೀದಿ ಬದಿ ತಿಂಡಿ ವ್ಯಾಪಾರ ಮಾಡುತ್ತಿದ್ದಾನೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದಾಗಿನಿಂದ, ಅಲ್ಲಿನ ಜನರ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಊಟ ತಿಂಡಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅಫ್ಘಾನಿಸ್ಥಾನದ ಜರ್ನಲಿಸ್ಟ್ ಆಗಿರುವ ಮುಸಾ ಮೊಹಮ್ಮದಿ ಎಂಬ ನ್ಯೂಸ್ ಆ್ಯಂಕರ್ ಪರಿಸ್ಥಿತಿ ಈಗ ತೀರಾ ಹದಗೆಟ್ಟು ಹೋಗಿದೆ. ಅವರಿಗೆ ತಿನ್ನಲು ಊಟಕ್ಕೂ ಗತಿ ಇಲ್ಲದೇ, ತನ್ನ ಕುಟುಂಬವನ್ನು ಸಾಕುವುದಕ್ಕೆ, ಬೀದಿ ಬದಿ, ಕುರುಕಲು ತಿಂಡಿಯನ್ನ ಮಾರಾಟ ಮಾಡುತ್ತಿದ್ದಾರೆ.

ಕಬೀರ್ ಹಕ್ಮಾಯ್ ಎಂಬುವರು ಈ ಫೋಟೋವನ್ನ ಟ್ವೀಟ್ ಮಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇಂಟರ್‌ನೆಟ್‌ನಲ್ಲಿ ಇವರ ಫೋಟೋ ವೈರಲ್ ಆಗುತ್ತಿದ್ದು, ಹಲವರು ಈ ಬಗ್ಗೆ ಕೋಪ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸುಮಾರು ಜನ ನಿರುದ್ಯೋಗಿಗಳಾಗಿ, ಹೊಟ್ಟೆಪಾಡಿಗಾಗಿ ಅಲೆದಾಡುತ್ತಿದ್ದಾರೆ. ಅದರಲ್ಲೂ ಅದರಲ್ಲೂ ಹೆಣ್ಣು ಮಕ್ಕಳನ್ನ ಮನೆಗೆ ಕಳುಹಿಸಲಾಗಿದೆ. ಇನ್ನು ಶಾಲಾ ಕಾಲೇಜಿನಿಂದ ಹೆಣ್ಣು ಮಕ್ಕಳನ್ನ ತೆಗೆಯಲಾಗಿದೆ. ಅಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಬರಬಾರದು ಅನ್ನೋ ರೂಲ್ಸ್ ಜಾರಿ ಮಾಡಲಾಗಿದೆ.

- Advertisement -

Latest Posts

Don't Miss