Thursday, April 17, 2025

Latest Posts

ವೆಂಕಟೇಶ್,ಜಯಕುಮಾರ್ ಆಗಿದ್ದ ಹಿರಿಯ ಖಳನಟ ಕೀರ್ತಿರಾಜ್..! ಹೀರೋ ಆಗಬೇಕಂತ ಬಂದು ಖಳನಟನಾದೆ..!

- Advertisement -

ಶೀಘ್ರದಲ್ಲೇ ತಂದೆ-ಮಗನ ಸಂದರ್ಶನ ಕರ್ನಾಟಕ ಟಿವಿಯಲ್ಲಿ..!

ಕನ್ನಡ ಚಿತ್ರರಂಗದಲ್ಲಿ ಹಲವರು ಖ್ಯಾತ ಖಳನಟರಿದ್ದಾರೆ. ಅದರಲ್ಲಿ ನಮ್ಮ ಹೆಮ್ಮೆಯ ಖಳನಟ ಕೀರ್ತಿರಾಜ್ ಸಹ ಒಬ್ಬರು. ತುಮಕೂರು ಜಿಲ್ಲೆಯ ಕೊರಟಗೆರೆ ಗ್ರಾಮದಲ್ಲಿ ಜನಿಸಿರೋ ನಟ ಕೀರ್ತಿರಾಜ್ ತಂದೆ ಜಸ್ಟೀಸ್ ಕೆ.ಭೀಮಯ್ಯ. 1977 ರಲ್ಲಿ ಸಣ್ಣ ಪುಟ್ಟ ಪಾತ್ರಗಳ ಕಾರ್ಯ ನಿರ್ವಹಣೆಯಿಂದ ರಜತ ಪರದೆಗೆ ಪಾದಾರ್ಪಣೆ ಮಾಡುತ್ತಾರೆ. ಬಳಿಕ ಸಹಾಯಕ ನಿರ್ದೇಶಕರಾಗಿ ಹಿರಿಯ ನಿರ್ದೇಶಕರಾದ ಎಮ್.ಆರ್ ವಿಠಲ್, ಅರಸುಕುಮಾರ್, ಪುಟ್ಟಣ್ಣ ಕಣಗಾಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಕಮಲ, ದೀಪ, ಮೈತ್ರಿ, ಪಿತಾಮಹ, ಪ್ರೀತಿಸಿ ನೋಡು, ಕರ್ಣ ಹೀಗೆ ಹಲವಾರು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸುತ್ತಾ ಇದ್ದ ಜಯಕುಮಾರ್ ರಾಜೇಂದ್ರ ಬಾಬು ನಿರ್ದೇಶನದ “ಒಲವಿನ ಉಡುಗೊರೆ” ಸಿನಿಮಾದಲ್ಲಿ ಹೀರೋಗೆ ಸಮನಾದ ಪಾತ್ರದಲ್ಲಿ ಕಂಡರು.ಅಲ್ಲಿಂದ ತಮ್ಮ ಹೆಸರನ್ನ ಕೀರ್ತಿ ಎಂದು ಬದಲಿಸಿಕೊಂಡರು.

“ಡ್ಯಾನ್ಸ್ ರಾಜಾ ಡ್ಯಾನ್ಸ್” ಸಿನಿಮಾದಲ್ಲಿ ನಟಿಸಿದ ಬಳಿಕ ಕೀರ್ತಿಗೆ ರಾಜ್ ಸೇರ್ಪಡೆಯಾಗಿ ಕೀರ್ತಿರಾಜ್ ಆಗಿ ಮುಂದಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸತೊಡಗಿದರು. ಬರೋಬ್ಬರಿ 35 ವರ್ಷಗಳು ಕನ್ನಡ ಚಿತ್ರರಂಗದಲ್ಲಿ ತಮ್ಮ ಕಲಾಸೇವೆ ಸಲ್ಲಿಸಿರೋ ನಟ ಕೀರ್ತಿರಾಜ್ ಈಗಲೂ ಧಾರವಾಹಿ ಹಾಗೂ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಪುತ್ರ ಧರ್ಮ ಕೀರ್ತಿರಾಜ್ 2008 ರಲ್ಲಿ “ನವಗ್ರಹ” ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.

ಈ ಸಿನಿಮಾ ಮೂಲಕ ತಮಗೆ ಹೊಸ ಇಮೇಜ್ ಕ್ರಿಯೇಟ್ ಆಗಿದ್ದರೂ ಮುಂದಿನ ಸಿನಿಮಾಗಳಲ್ಲಿ ಒಳ್ಳೆಯ ಕಥೆ ಇವರ ಕೈ ಹಿಡಿಯದೇ ಹಲವು ಸಿನಿಮಾಗಳು ಅಭಿಮಾನಿಗಳ ಮನಸ್ಸನ್ನ ಗೆಲ್ಲಲಿಲ್ಲ. ಹಾಗಂತ ಸಿನಿಮಾ ಕ್ಷೇತ್ರವನ್ನೇ ಬಿಡೋ ಮನಸ್ಸು ಮಾಡಲಿಲ್ಲ. ಬದಲಿಗೆ ಅದೇ ಛಲ, ಕಾನ್ಫಿಡೆಂಟ್‌ನಿಂದ ಇದೇ ಸಿನಿಮಾರಂಗದಲ್ಲೇ ನಮ್ಮ ತಂದೆಯ ಹಾಗೇ ನಾನು ಹೆಸರು ಮಾಡ್ಬೇಕು ಅನ್ನೋ ಹಠದಿಂದ ಮುನ್ನುಗ್ಗುತ್ತಿದ್ದಾರೆ.

ಸದ್ಯ 9-10 ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟ ಧರ್ಮ ಕೀರ್ತಿರಾಜ್ ಹೀರೋ ಜೊತೆಯಲ್ಲಿ ವಿಲನ್ ಆಗಿಂಯೂ ಎಂಟ್ರಿ ಕೊಡೋದಕ್ಕೆ ಸಜ್ಜಾಗಿದ್ದಾರೆ. ಇಷ್ಟೇ ಅಲ್ಲ ತಂದೆ-ಮಗನ ಸಾಕಷ್ಟು ಇಂಟ್ರೆಸ್ಟಿAಗ್ ಸ್ಟೋರಿಯನ್ನ ನೀವು ಕೇಳ್ಬೇಕು ಅಂದ್ರೆ ಶೀಘ್ರದಲ್ಲೇ ಇವರಿಬ್ಬರ ಸಂದರ್ಶನ ಕರ್ನಾಟಕ ಟಿವಿಯಲ್ಲಿ ಪರಸಾರವಾಗುತ್ತೆ..ಮಿಸ್ ಮಾಡ್ದೇ ನೋಡಿ..

ನಳಿನಾಕ್ಷಿ, ಕರ್ನಾಟಕ ಟಿವಿ

- Advertisement -

Latest Posts

Don't Miss