Tuesday, January 14, 2025

Latest Posts

ಹಲವು ಸಮಸ್ಯಕ್ಕೆ ಬೀಟ್ರೂಟ್ ಪರಿಹಾರ.!

- Advertisement -

ಇತ್ತೀಚಿಗೆ ಸಾಮಾನ್ಯವಾಗಿ ಎಲ್ಲರಲ್ಲು ಕಾಡುವ ಸಮಸ್ಯೆಗಳಲ್ಲಿ ಕೂದಲು ಉದುರುವ ಕೂಡ ಒಂದು. ಕೂದಲು ಉದುರುವಿಕೆಯನ್ನ ತಡೆಗಟ್ಟಲು, ಸಾಕಷ್ಟು ರೀತಿಯ ಔಷಧಿಗಳನ್ನು ಪಡೆಯುತ್ತೀವಿ ಹಾಗೂ ಸಾಕಷ್ಟು ಎಣ್ಣೆಗಳನ್ನು ಉಪಯೋಗಿಸುತ್ತೇವೆ ಆದರೂ ಕೂಡ ಕೆಲವೊಮ್ಮೆ ಕೂದಲು ಉದುರುವಿಕೆ ನಿಲ್ಲುವುದಿಲ್ಲ. ಆದರೆ ಹೆಚ್ಚಾಗಿ ಬೀಟ್ರೂಟ್ ಸೇವಿಸುವುದರಿಂದ ನಮ್ಮ ಕೂದಲನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಕೇವಲ ಕೂದಲು ಅಷ್ಟೇ ಅಲ್ಲ ಬೀಟ್ರೂಟ್ ಸೇವನೆಯಿಂದ ರಕ್ತದ ಮಟ್ಟವನ್ನು ಸಹ ಹೆಚ್ಚಿಸಿಕೊಳ್ಳಬಹುದು.

ಬೀಟ್ರೂಟ್‌ ಅಲ್ಲಿ ವಿಟಮಿನ್ ಬಿ 6, ಸಿ, ಕ್ಯಾರೊಟಿನಾಯ್ಡ್‌ ಮತ್ತು ಪೊಟ್ಯಾಸಿಯಮ್ ಇದೆ. ನೀವು ಬೀಟ್ರೂಟ್ ರಸವನ್ನು ನೆತ್ತಿಯ ಮೇಲೆ ಹಚ್ಚಿ ಮಸಾಜ್ ಮಾಡುವುದರಿಂದ ನೆತ್ತಿಯ ರಕ್ತ ಪರಿಚಲನೆಯು ಬೇರುಗಳನ್ನು ಬಲಪಡಿಸುತ್ತದೆ. ರಸವನ್ನು ಹಚ್ಚಿದಾಗ ಬೀಟ್ರೂಟ್ ನ ಕೆಂಪು ಬಣ್ಣ ಕೂದಲಿಗೆ ಹಿಡಿಯುತ್ತದೆ ಅದನ್ನು ನೀರಿನಿಂದ ತೊಳೆದರೆ ಆ ಬಣ್ಣ ಹೋಗುತ್ತದೆ. ಬೀಟ್ರೂಟ್‌ ರಸವನ್ನು ನಿಯಮಿತವಾಗಿ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಪಾರಾಗಬಹುದು.

ಕೆಲಮೊಮ್ಮೆ ನಾವು ಸಾಕಷ್ಟು ಶ್ಯಾಂಪುಗಳನ್ನು ಬಳಸಿದರು ಕೂಡ ತಲೆಹೊಟ್ಟು ಹೋಗಿರುವುದಿಲ್ಲ, ನಿಮಗೂ ಹಾಗಾಗಿದ್ದರೆ ಇದನ್ನೊಮ್ಮೆ ಪ್ರಯತ್ನಿಸಿ ನೋಡಿ. ಬೀಟ್ರೂಟ್ ನಲ್ಲಿ ನೀರಿನ ಅಂಶ ಇರುವುದರಿಂದ ನಿಮ್ಮ ನೆತ್ತಿಯನ್ನು ತೇವಗೊಳಿ ಹೀಟ್ ಆಗುವುದನ್ನ ತಡೆಯುತ್ತದೆ. ಇದಷ್ಟೇ ಅಲ್ಲ ಕೆಲವರಿಗೆ ಚಿಕ್ಕವಯಸ್ಸಿನಲ್ಲೇ ಕೂದಲು ಬಿಳಿಯಾಗುತ್ತಿರುತ್ತದೆ. ಅಂತಹವರು ಕೂಡ ಬೀಟ್ರೂಟ್ ರಸವನ್ನು ಕೂದಲಿಗೆ ಹಚ್ಚಬಹುದು.

ನೆತ್ತಿಯ ರಕ್ತ ಪರಿಚಲನೆಗೆ ಬೀಟ್ರೂಟ್ ಬಹಳ ಮುಖ್ಯ. ಕಳಪೆ ರಕ್ತ ಪರಿಚಲನೆಯಿಂದಾಗಿ ನಿಮ್ಮ ಕೂದಲು ಉದುರುವುದು, ಕವಲು ಒಡೆಯುವಿಕೆಗೆ ಕಾರಣವಾಗುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ, ನೀವು ನಿಮ್ಮ ಕೂದಲಿಗೆ ಹೆಚ್ಚು ಅಗತ್ಯವಿರುವ ವರ್ಧಕವನ್ನು ನೀಡುತ್ತೀರಿ.

ಬೀಟ್‌ರೂಟ್ ಜ್ಯೂಸ್‌ನಲ್ಲಿ ವಿಟಮಿನ್ ಎ, ಸಿ, ಇ ಮತ್ತು ಎಲೆಕ್ಟ್ರೋಲೈಟ್‌ಗಳು ಇವೆ. ಹಾಗಾಗಿ ಬೀಟ್‌ರೂಟ್ ಜ್ಯೂಸ್‌ ಕುಡಿಯುವುದು ಉತ್ತಮ. ಬೀಟ್ರೂಟ್ ನಲ್ಲಿ ಬಹಳ ಪೋಷಕಾಂಶಗಳಿವೆ. ಇದು ಕೂದಲಿಗಷ್ಟೇ ಅಲ್ಲದೆ ನಿಮ್ಮ ಆರೋಗ್ಯಕ್ಕೂ ಅಷ್ಟೇ ಸಹಾಯವಾಗಿದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

- Advertisement -

Latest Posts

Don't Miss