ಕೋಲಾರ: ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರನ್ನು ಮಂತ್ರಿ ಮಾಡಬೇಕೆಂದು, ಅವರ ಅಭಿಮಾನಿಗಳು ರಕ್ತದಲ್ಲಿ ಪತ್ರ ಬರೆದಿದ್ದಾರೆ.
10ಕ್ಕೂ ಹೆಚ್ಚು ಎಸ್.ಎನ್.ನಾರಾಯಣಸ್ವಾಮಿ ಅಭಿಮಾನಿಗಳು ತಮ್ಮ ರಕ್ತವನ್ನು ಸಂಗ್ರಹಿಸಿ, ಅದರಿಂದ ನಾರಾಯಣಸ್ವಾಮಿಯವರಿಗೆ ಈ ಬಾರಿ ಸಚಿವ ಸ್ಥಾನ ನೀಡಲೇಬೇಕೆಂದು, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಎಸ್.ಎನ್ ನಾರಾಯಣಸ್ವಾಮಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಎಸ್ಎನ್ ನಾರಾಯಣಸ್ವಾಮಿಗೆ, ಜಿಲ್ಲೆಯ ಅಭಿವೃದ್ಧಿ ಮಾಡುವ ಅವಕಾಶವಾಗಿ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಗೆ ನಾರಾಯಣಸ್ವಾಮಿಗಳ ಅಭಿಮಾನಿಗಳು ಪತ್ರ ಬರೆದಿದ್ದು, ಅತ್ತ ಸಿಎಂ ಸ್ಥಾನಕ್ಕಾಗಿ ಲಾಬಿ ನಡೆಯುತ್ತಿರುವಾಗಲೇ, ಇತ್ತ ಸಚಿವ ಸ್ಥಾನಕ್ಕಾಗಿ ಒತ್ತಾಯಯೂ ಹೆಚ್ಚಾಗುತ್ತಿದೆ.
‘ಸಿಎಂ ಯಾರೇ ಆದರೂ ಸ್ವಾಗತ ಮಾಡ್ತೀನಿ. ಯಾರೇ ಆದರೂ ರಾಜ್ಯದ ಅಭಿವೃದ್ಧಿ ಮಾಡಲಿ’
‘ಇಬ್ಬರಿಗೂ ಎರಡೆರಡು ವರ್ಷ ಸಿಎಂ ಸ್ಥಾನ ನೀಡಲಿ. ಉಳಿದ ಒಂದು ವರ್ಷ ದಲಿತರಿಗೆ ಸಿಎಂ ಸ್ಥಾನ ನೀಡಲಿ’