Tuesday, July 22, 2025

Latest Posts

ಜಿಲ್ಲಾಧಿಕಾರಿ ಎಸ್.ಅಶ್ವತಿ ರವರಿಗೆ ಬೀಳ್ಕೊಡುಗೆ ಸಮಾರಂಭ..

- Advertisement -

ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ವತಿಯಿಂದ ನಿಕಟಪೂರ್ವ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರಿಗೆ ಸ್ವಾಗತ ಕಾರ್ಯಕ್ರಮವು ನೆರವೇರಿಸಲಾಯಿತು.

ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ಬಹಳ ಸಂತಸ ತಂದಿದೆ. ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ  ನನ್ನ ಅವಧಿಯಲ್ಲಿ ಜಿಲ್ಲಾಡಳಿತ ಹಾಗೂ ಎಲ್ಲಾ ಅಧಿಕಾರಿಗಳು ಸಹ ಬಹಳ ಉತ್ತಮವಾಗಿ ಸಹಕರಿಸಿದಿರ ತಮ್ಮೆಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿಗಳಾದ ಎಸ್.ಅಶ್ವತಿ ಅವರು ತಿಳಿಸಿದರು.

‘ಅಪ್ಪಿ ತಪ್ಪಿಯೂ ಭವಾನಿ ರೇವಣ್ಣ ಮನೆ ಹತ್ರ ಸರ್ಕಾರಿ ನೌಕರರು ಹೋಗ್ಬೇಡಿ’

ಎಲ್ಲಾ ಇಲಾಖೆಯ ಅಧಿಕಾರಿಗಳು ಇಲಾಖೆ ಕಾರ್ಯಕ್ರಮಗಳು,ಶ್ರೀರಂಗಪಟ್ಟಣ ದಸರಾ, ಕುಂಭಮೇಳ ಹೀಗೆ ಅನೇಕ ದೊಡ್ಡ ಕಾರ್ಯಕ್ರಮಗಳಲ್ಲಿಯೂ ಸಹ ತಮಗೆ ನಿರ್ವಹಿಸಿದಂತಹ ಕೆಲಸ ಕಾರ್ಯಗಳನ್ನು ಉತ್ತಮವಾಗಿ ಹಗಲು ರಾತ್ರಿ ಎನ್ನದೆ ನಿರ್ವಹಿಸಿದ್ದೀರಿ ಎಂದರು.

ಇಡೀ ರಾಜ್ಯದಲ್ಲಿ ಮಂಡ್ಯ ಜಿಲ್ಲೆಗೆ ಉತ್ತಮವಾದ ಹೆಸರು ಇದೆ. ಅದಕ್ಕೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಕಾರ್ಯವೈಕರಿಯೇ ಕಾರಣವಾಗಿದೆ ಎಂದು ಹೇಳಿದರು.ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಜಿಲ್ಲಾಡಳಿತಕ್ಕೆ ಎಡ ಮತ್ತು ಬಲ ಕೈಗಳು ಇದ್ದಹಾಗೆ. ಜಿಲ್ಲಾಡಳಿತದ ಕಾರ್ಯಕ್ರಮಗಳು ಯಶಸ್ವಿ ನಡೆಯಲು ಇವರ ಸಹಕಾರ ಬಹಳ ಅಗತ್ಯವಿದೆ ಎಂದರು.

ಮೇಲುಕೋಟೆಯ ವೈರಮುಡಿ ಉತ್ಸವ, ಕುಂಭಮೇಳ ಹಾಗೂ ಇನ್ನಿತರ ಜಿಲ್ಲೆಗೆ ಮಾನ್ಯ ಮುಖ್ಯಮಂತ್ರಿಗಳು ಆಗಮಿಸಿರುವ ಕಾರ್ಯಕ್ರಮಗಳು ಬಹಳ ಉತ್ತಮವಾಗಿ ಎಲ್ಲರ ಸಹಕಾರದೊಂದಿಗೆ ಆಗಿದೆ ಇದರಿಂದ ಬಹಳ ಸಂತೋಷ ತಂದಿದೆ ಎಂದರು.

ನೂತನ ಜಿಲ್ಲಾಧಿಕಾರಿ ಡಾ.ಹೆ.ಎನ್ ಗೋಪಾಲಕೃಷ್ಣ ಅವರು ಮಾತನಾಡಿ ಜಿಲ್ಲಾಡಳಿತ ಎಂದರೆ ಹಲವಾರು ಸವಾಲುಗಳಿರುತ್ತವೆ. 20 ತಿಂಗಳುಗಳ ಕಾಲ ಅಶ್ವತಿ ಅವರ ಅವಧಿಯಲ್ಲಿ ಕೋವಿಡ್ ಸಮಯ, ಅತಿವೃಷ್ಟಿ ಹಾಗೂ ಉತ್ಸವಗಳು ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ ಎಂಬುದಕ್ಕೆ ಜಿಲ್ಲಾಡಳಿತ ಹಾಗೂ ಎಲ್ಲಾರ ಸಹಕಾರದೊಂದಿಗೆ ಆಗಿದೆ ಎಂದರು.

‘ತಾಯಿ ಮಗ ಇಬ್ಬರೂ 30, 60 ಅಲ್ಲ ಎರಡು ಬಾಟಲ್ ಕುಡಿದಿರ್ತಾರೆ’

ಉತ್ತಮವಾಗಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಾಗ ನೂತನವಾಗಿ ಜಿಲ್ಲಾಧಿಕಾರಿಗಳಾಗಿ ನೇಮಕವಾಗಿ ಬರುವವರ ಮೇಲೆ ಜಿಲ್ಲೆಯಲ್ಲಿ ಬಹಳ ನಿರೀಕ್ಷೆಯ ಭಾರ ಹೆಚ್ಚು ಇರುತ್ತವೆ. ಜಿಲ್ಲೆಯಲ್ಲಿ ಹೆಚ್ಚು ಅನುಭವಿರುವ ಹಿರಿಯ  ಹಾಗೂ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿರುವ ಅಧಿಕಾರಿಗಳು ಇದ್ದೀರಿ ತಮ್ಮೆಲ್ಲ ರಿಂದ ಉತ್ತಮ ರೀತಿಯ ಸಹಕಾರದ ಅಗತ್ಯವನ್ನು ಬಯಸುತ್ತೇನೆ ಎಂದು ಹೇಳಿದರು.

ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ, ರೈತರಿಗೆ,ಬಡವರಿಗೆ, ಅನುಕೂಲಕರವಾಗುವಂತಹ ರೀತಿಯಲ್ಲಿ  ಕೆಲಸ ಮಾಡೋಣ. ಎಲ್ಲರೂ ಒಗ್ಗೂಡಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ನಿರ್ವಹಿಸೋಣ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ  ಎಲ್. ಹುಲ್ಮನಿ ಅವರು ಮಾತನಾಡಿ  ಜಿಲ್ಲಾಧಿಕಾರಿಗಳಾಗಿ ಅಶ್ವತಿ ಅವರ ಕಾರ್ಯವೈಖರಿ ಬಗ್ಗೆ ತಿಳಿದಿದ್ದೇನೆ ಅವರಿದ ಸಾಕಷ್ಟು ವಿಷಯಗಳನ್ನು ನಾನು ಸಹ ಕಲಿತಿದ್ದೇನೆ ಎಂದರು.

ಅನೇಕ ಅಧಿಕಾರಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ನಾನು ಬಹಳ ಹತ್ತಿರದಿಂದ ಅಶ್ವತಿ ಅವರನ್ನು ನೋಡಿದ್ದೇನೆ.ಅವರ ಅವಧಿಯಲ್ಲಿ ಯಾವ ಕೆಲಸಗಳು ಮಾಡಬೇಕು ಎಂಬುದನ್ನು ಬಹಳ ಶ್ರದ್ಧೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು ಇವು ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದರು.

ಜಿಲ್ಲಾ ಪಂಚಾಯತ್ ಸಿಇಒ ಹಾಗಿ ನೇಮಕವಾದಂತ ಸಂದರ್ಭದಲ್ಲಿ ಶ್ರೀರಂಗಪಟ್ಟಣ ದಸರಾ, ಕುಂಭಮೇಳ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ  ಅವರ ಜೊತೆ ಕೆಲಸ ಮಾಡಿ ಬಹಳ ಸಂತೋಷವಿದೆ. ಅನೇಕ ಕಾರ್ಯಕ್ರಮ ಯಶಸ್ವಿಗೆ ಬಹಳ ಮುಂಚೂಣಿಯಲ್ಲಿ ಅಶ್ವತಿರವರು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಅಶ್ವತಿ ಅವರಂತಹ ಅಧಿಕಾರಿಗಳು ಜಿಲ್ಲೆಯಲ್ಲಿ ಇದ್ದರೆ ಜಿಲ್ಲೆ ಬಹಳಷ್ಟು ಅಭಿವೃದ್ಧಿಯನ್ನು ಕಾಣಬಹುದು.  ಸಕಾಲ ಹಾಗೂ ಅಟಲ್ ಜೀ ಜನಸ್ನೇಹಿಯಲ್ಲಿ 3  ತಿಂಗಳುಗಳ ಕಾಲ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಈ ಸಾಧನೆಗೆ ಅವರ ನಾಯಕತ್ವವೇ ಮೂಲ ಕಾರಣ ಇಂತಹ ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.

‘ಅವ್ವಾ ಮಗನಿಗೆ ಸುಳ್ಳು ಹೇಳೋ ಡಿಎನ್‌ಎ ಪ್ರಾಬ್ಲಂ ಇರ್ಬೇಕು’

ಇದೆ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಅವರು ಮಾತನಾಡಿ ಆಧುನಿಕ ತಂತ್ರಜ್ಞಾನವನ್ನು ಬೆಳೆಸಿಕೊಂಡು ಸರ್ಕಾರದ ಅಪೇಕ್ಷೆಯನ್ನು ಈಡೇರಿಸುವಂತಹ ಹಂತದಲ್ಲಿ ರಾಜ್ಯಕ್ಕೆ ಮಾದರಿಯಾಗಿ ವಿಶೇಷ ಮಹಿಳಾ ಜಿಲ್ಲಾಧಿಕಾರಿಗಳಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಿದಂತಹ ಜಿಲ್ಲಾಧಿಕಾರಿ ಅಶ್ವತಿ ರವರಿಗೆ ಜಿಲ್ಲಾಡಳಿತ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

ಜಿಲ್ಲಾಧಿಕಾರಿಯಾಗಿ ಸಭೆ,ಸಮಾರಂಭಗಳಲ್ಲಿ ಅವರೇ ಖುದ್ದಾಗಿ ಹಾಜರಾಗಿ ಹಗಲು ಇರುಳು ಎನ್ನದೆ ಜಿಲ್ಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಉತ್ತಮವಾಗಿ ಯಶಸ್ವಿಯಾಗಿ ಮಾಡಲು ನಿರಂತರವಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಅವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು. ಮಂಡ್ಯ ಜಿಲ್ಲೆಗೆ ನೂತನವಾಗಿ ಜಿಲ್ಲಾಧಿಕಾರಿಗಳಾಗಿ ನೇಮಕವಾಗಿರುವ ಡಾ. ಹೆಚ್.ಎನ್.ಗೋಪಾಲಕೃಷ್ಣ ರವರಿಗೂ ಸ್ವಾಗತವನ್ನು ಕೋರುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅರಣ್ಯ ಉಪ ಸಂರಕ್ಷಣಾಧಿಕಾರಿ ರುದ್ರೇನ್, ಪಾಂಡವಪುರ ವಿಭಾಗಾಧಿಕಾರಿ ಬಿ.ಸಿಶಿವಾನಂದಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಗೌಡ, ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕ ಸ್ವಾಮಿಗೌಡ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest Posts

Don't Miss