ಹಾಸನ : ಜಿಲ್ಲೆಯ ವಿವಿಧ ತಾಲೂಕು ಮಗಳ ಆತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಎಲ್ಲಾ ಬೆಳೆಗಳು ನಾಶವಾಗಿದ್ದು, ಕಂಗಾಲಾಗಿರುವ ರೈತರಿಗೆ ಪರಿಹಾರ ನೀಡುವಲ್ಲಿ ಸರಕಾರ ವಿಫಲವಾಗಿದ್ದು, ಸರಕಾರದ ಗಮನಸೆಳೆಯುವ ಉದ್ದೇಶದಲ್ಲಿ ಪತ್ರ ಚಳುವಳೀ ಮೂಲಕ ಪ್ರಧಾನಿಗೆ ರವಾನೆ ಮಾಡಲಾಗುವುದು. ಆಮ್ ಆದ್ಮಿ ಪಕ್ಷದ ವತಿಯಿಂದ ನವೆಂಬರ್ ಒಂಬತ್ತರಿಂದ ರೈತ ಸಂಪರ್ಕ ಯಾತ್ರೆ ಹಮ್ಮಿಕೊಳ್ಳಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅಗಿಲೆ ಯೋಗೀಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ತಾಲೂಕಿನ ಬೈಲಹಳ್ಳಿ ಲಕ್ಷ್ಮೀ ಜನಾರ್ಧನ ಸನ್ನಿದಿಯಿಂದ ನವೆಂಬರ್ ೯ ರಂದು ಯಾತ್ರೆ ಪ್ರಾರಂಭವಾಗಲಿದ್ದು, ಈ ಯಾತ್ರೆಗೆ ಚಾಲನೆ ನೀಡಲು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಆಗಮಿಸಲಿದ್ದು, ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಅರಿವು ಮೂಡಿಸಿ ಅವರ ಮೂಲಕ ಪತ್ರ ಚಳುವಳಿ ನಡೆಸಿ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ತಲುಪಿಸುವ ಮೂಲಕ ಅವರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದರು. ಜಿಲ್ಲಾಧಿಕಾರಿಗಳು ರೈತರ ಬಗ್ಗೆ ಯಾವ ಕಾಳಜಿ ಹೊಂದಿರುವುದಿಲ್ಲ. ಪರಿಹಾರ ನೀಡಲು ಯಾವುದೇ ರೀತಿಯ ಕ್ರಮವಹಿಸಿಲ್ಲ.
ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟಿ ಅದಿತಿ ಪ್ರಭುದೇವ್
ಇದುವರೆಗೂ ಜಿಲ್ಲೆಯಲ್ಲಿ ಆಗಿರುವ ಅತಿವೃಷ್ಠಿ ಹಾನಿಯಾಗಿರುವ ಫಲಾನುಭವಿಗಳಿಗೆ ಪ್ರತಿ ಎಕರೆಗೆ ೧ ಲಕ್ಷ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕಾದ ಜಿಲ್ಲಾಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕ್ರಮ ಕೈಗೊಳ್ಳದೇ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು. ಯಾತ್ರೆಯಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸುವ ಜೊತೆಗೆ ಅವರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲಾಗುವುದು, ಪತ್ರ ಚಳುವಳಿ ಮೊದಲ ಹಂತದ ಹೊರಟವಾಗಿದ್ದು ಅದಕ್ಕೂ ಸ್ಪಂದಿಸದೆ ಇದ್ದರೆ ಆಮ್ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಅಸಂಸ್ಕೃತವಾದ ಪದಗಳನ್ನು ಶಾಸಕರಾದ ಪ್ರೀತಮ್ ಗೌಡ್ರು ಬಳಕೆ ಮಾಡಬಾರದಿತ್ತು. ನಾನು ರಾಜಕೀಯವಾಘಿ ಶಾಸಕರನ್ನು ವಿರೋಧ ಮಾಡುತ್ತೇನೆ ಹೊರತು. ಅವರ ತಂದೆ ತಾಯಿ ತುಂಬ ಸಭ್ಯತೆಯರು, ವಿದ್ಯಾವಂತರು, ಸಂಸ್ಕೃತಿ ಉಳ್ಳವರು. ಅಂತಹ ಹೊಟ್ಟೆಯಲ್ಲಿ ಹುಟ್ಟಿದ ಶಾಸಕರು ಅಂತಹ ಪದ ಪ್ರಯೋಗ ಮಾಡಬಾರದು. ಒಬ್ಬರು ಹೆಣ್ಣು ಮಗಳ ಬಗ್ಗೆ ಡಿ.ಎನ್.ಎ. ಪದ ಹೇಳಬಾರದಿತ್ತು. ಅದರ ಅರ್ಥ ಏನು? ಮಹಿಳೆಯರು ಡಿಸಿ ಕಚೇರಿ ಮುಂದೆ ಬಂದು ಶಾಸಕರ ವಿರುದ್ಧ ಹೋರಾಟ ಮಾಡಿ ಹೋಗುವುದಲ್ಲ. ಇನ್ನೊಂದು ಬಾರಿ ಇಂತಹ ಮಾತನ್ನು ಮಾತನಾಡಬಾರದು. ಡಿಎನ್.ಎ. ಪ್ರಾಬ್ಲಮ್ ಏನೆಂದು ಚೆಕ್ ಮಾಡಿಸಿ ಪಲಿತಾಂಶ ಕೊಡಿ ಎಂದು ಮಹಿಳೆಯರು ಪಟ್ಟು ಹಿಡಿಯಬೇಕಾಗಿತ್ತು ಎಂದು ಸಲಹೆ ನೀಡಿದರು.
ಕೆ.ಆರ್.ಪೇಟೆಯಲ್ಲಿ ಮಳೆ ಹಾನಿಗೊಳಗಾದ ರಸ್ತೆಗಳ ದುರಸ್ಥಿಗೆ 15 ಕೋಟಿ ಬಿಡುಗಡೆ: ಸಚಿವ ಡಾ.ನಾರಾಯಣಗೌಡ
ಭವಾನಿ ಅಕ್ಕನು ಕೂಡ ಆ ಪದ ಬಳಕೆ ಮಾಡಬಾರದು. ಆನ ಅಧಿಕಾರಕ್ಕೆ ಕೊಡ್ಡ ಮೇಲೆ ಜನರು ಮನೆಗೆ ಹೋಗುವುದು ಸಹಜ. ಅಧಿಕಾರ ಕೊಟ್ಟಿರುವುದಕ್ಕೆ ನಿಮ್ಮ ಬಳಿ ಬಂದಿರುತ್ತಾರೆ. ಆತರ ಪದಗಳನ್ನು ಭವಾನಿ ಅಕ್ಕ ಕೂಡ ಬಳಸಬಾರದು. ಅವರ ಘನತೆಗೆ ಪದ ಬಳಕೆ ತಕ್ಕವಾಗಿಲ್ಲ ಎಂದರು. ರೇವಣ್ಣನವರು ೮ನೇ ಕ್ಲಾಸ್ ಎಂದು ಶಾಸಕರಾದ ಪ್ರೀತಮ್ ಗೌಡ ಅವರು ಆಗಾಗ್ಗೆ ಪದ ಬಳಕೆ ಮಾಡುವಾಗ ಭವಾನಿ ಅವರಿಗೆ ನೋವಾಗುತ್ತದೆ. ಜೆಡಿಎಸ್ ನಾಯಕರು ಶಾಸಕರ ಬಗ್ಗೆ ಹೆಚ್ಚು ಮಾತನಾಡಿ ಶಾಸಕ ಪ್ರೀತಂ ಗೌಡರನ್ನು ಅವರೆ ದೊಡ್ಡವರಾಗಿ ಮಾಡಿದವರು ಎಂದು ತೆಗಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಮಂಜುನಾಥ, ಗೋಪಾಲ್, ಸ್ವಾಮಿ, ಹರೀಶ್, ದಾವದ್ ಇತರರು ಉಪಸ್ಥಿತರಿದ್ದರು.