Friday, August 29, 2025

Latest Posts

ರಸ್ತೆಯ ಮಧ್ಯೆ ಎತ್ತಿನಗಾಡಿ ನಿಲ್ಲಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಕೈಗೊಂಡ ರೈತರು..!

- Advertisement -

ಧಾರವಾಡ : ರಾಜ್ಯದಲ್ಲಿ ವಿದ್ಯುತ್ ಕೊರತೆ ಎದ್ದು ಕಾಣುತ್ತಿದ್ದು ಸರಿಯಾಗಿ ಕರೆಂಟ್ ಬರದ ಕಾರಣ ರೈತರು ತಮ್ಮ ಜಮೀನುಗಳಿಗೆ ಸರಿಯಾಗಿ ಪಂಪ್ ಸೆಟ್ ಮೂಲಕ ನೀರನ್ನು ಹರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಹಾಗಾಗಿ ಬೆಳೆಗಳು ಒಣಗಿ ಹೋಗುತ್ತಿವೆ ಇದರಿಂದ ಆತಂಕಕ್ಕೆ ಒಳಗಾದ ರೈತರು ಕೆಇಬಿ ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದಿದ್ದಾರೆ.

ಧಾರವಾಡ ಮತ್ತು ಬೆಳಗಾವಿ ರಸ್ತೆಯಲ್ಲಿರುವ ಹೆಸ್ಕಾಂ ವಿದ್ಯುತ್ ಕೇಂದ್ರದ ಮುಂದೆ ತಾಲೂಕಿನ  ನರೇಂದ್ರ ಗ್ರಾಮದ ರೈತರು ಎತ್ತಿನ ಗಾಡಿ  ಅಡ್ಡ ಹಾಕಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಮೊದಲು 7 ತಾಸು ವಿದ್ಯುತ್ ಇರುತ್ತಿತ್ತು. ಆದರೆ ನಾಲ್ಕು ತಾಸು ಕಡಿತ ಮಾಡಿದ ಹಿನ್ನೆಲೆ ಸರಿಯಾದ ವಿದ್ಯುತ್ ಪೂರೈಕೆ ಆಗುತ್ತಿಲ್ಲವೆಂದು ಹಿನ್ನೆಲೆ ಆಕ್ರೋಶಗೊಂಡ ರೈತರು ವಿದ್ಯುತ್ ಕೇಂದ್ರದ ಮುಂದೆ ಪ್ರತಿಭಟನೆ ಕೈಗೊಂಡರು.

ಪ್ರತಿಭಟನೆಯನ್ನು ಹತ್ತಿಕ್ಕಲು  ಕೇಂದ್ರದ ಅಧಿಕಾರಿ ಮನವಿ ಮಾಡಿಕೊಂಡರು ರೈತರು ಅಧಿಕಾರಿಗಳ ಮನವಿಗೆ ಸ್ಪಂದಿಸಲಿಲ್ಲ ಈ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕೇಂದ್ರದ ಸುತ್ತ ಪೊಲೀಸ್ ಸರ್ಪಗಾವಲು ಹಾಕಿದರು. ಹಾಗಾಗಿ ಕೆಲಕಾಲ ಅಧಿಕಾರಿಗಳು ಮತ್ತು ರೈತರ ನಡುವೆ ವಾಗ್ವಾದ ಉಂಟಾಗಿತ್ತು.

ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ; ಅಡಿಕೆ ಬೆಳೆಗಾರರ ಅಳಲು

ಎಪಿಎಂಸಿ ಲೈಸೆನ್ಸ್ ದಾರರಿಗೆ ಬಿಸಿ ಮುಟ್ಟಿಸಲು ಮುಂದಾದ ಸರ್ಕಾರ: ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ

ಕಾಂಗ್ರೆಸ್ ಸರ್ಕಾರ ರಾಜ್ಯದ ಜನರು ತಲೆ ತಗ್ಗಿಸುವಂತೆ ಮಾಡುತ್ತಿದೆ; ವಿಶ್ವೇಶ್ವರಯ್ಯ ಹೆಗ್ಡೆ ಕಾಗೇರಿ..!

- Advertisement -

Latest Posts

Don't Miss