Sunday, September 8, 2024

Latest Posts

ವರುಣನಿಗಾಗಿ ಕತ್ತೆ ಮದುವೆ, ಸ್ಮಶಾನದ ಗೋರಿ ಅಗೆದು ನೀರು ಹಾಕಿದ ಜನ..

- Advertisement -

Gadag News: ಗದಗ: ಮುಂಗಾರುಮಳೆಯಾಗದ ಕಾರಣ, ಗದಗದಲ್ಲಿ ಜನ ಕತ್ತೆಗಳ ಮದುವೆಯ ಮೊರೆ ಹೋಗಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕುರುಗೋವಿನಕೊಪ್ಪದ ಗ್ರಾಮಸ್ಥರೆಲ್ಲ ಸೇರಿ ಕತ್ತೆಗಳ ಮದುವೆ ಮಾಡಿದರು.

ಬಿತ್ತಿದ ಬೆಳೆಗೆ ಹಾಗೂ ಬಿತ್ತಬೇಕಾದ ಭೂಮಿಗೂ ಮಳೆಯಿಲ್ಲದ್ದಕ್ಕೆ ಕತ್ತೆ ಮದುವೆ ಮಾಡಿಸಿದ್ದು, ಹೀಗೆ ಮಾಡಿದರೆ ಮಳೆಯಾಗಬಹುದೆಂಬ ನಂಬಿಕೆ ಇದೆ. ಗ್ರಾಮಸ್ಥರಲ್ಲಿನ‌ ಒಂದು ಗುಂಪು ವಧು-ಮತ್ತೊಂದು ವರನ ಕಡೆಯಾಗಿ ಮದುವೆ ಮಾಡಿಸಿದ್ದು, ವರುಣದೇವ ಕರುಣೆ ತೋರೆಂದು ಪ್ರಾರ್ಥಿಸಿದರು.

ಇನ್ನು ವಿಜಯಪುರದಲ್ಲಿ ಮಳೆ ಬರಲೆಂದು ಜನ ಸ್ಮಶಾನದಲ್ಲಿ ಗೋರಿಗಳನ್ನು ಅಗೆದು, ನೀರು ಹಾಕಿದ್ದಾರೆ. ಅಲ್ಲದೇ, ಮತ್ತೆ ಗೋರಿ ಮುಚ್ಚಿ, ಅದರ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಜನ ಇಂಥ ವಿಚಿತ್ರ ಪದ್ಧತಿ ಆಚರಿಸಿದ್ದು, ವರುಣನಿಗಾಗಿ ಪ್ರಾರ್ಥಿಸಿದ್ದಾರೆ.

ಭೂ ಮಾಪನ ಇಲಾಖೆ ಕಚೇರಿ ಬಾಗಿಲು ಹಾಕಿ ಆಲೂರು ರೈತ ಸಂಘದ ವತಿಯಿಂದ ಪ್ರತಿಭಟನೆ.

‘ಬಿಜೆಪಿಗೆ ಹೋದವರನ್ನ ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮಾತೇ ಇಲ್ಲ’

ಬಾಡಿಗೆ ನೀಡದ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ವಾರ್ನ್ ಮಾಡಿದ ಪುರಸಭೆ ಅಧ್ಯಕ್ಷೆ..

- Advertisement -

Latest Posts

Don't Miss