Thursday, January 30, 2025

Latest Posts

ಧಾರವಾಡ ಪಾಲಿಕೆಗೆ ನರೇಂದ್ರ-ಮುಮ್ಮಿಗಟ್ಟಿ ಗ್ರಾಮ ಸೇರ್ಪಡೆಯಾಗಬಾರದೆಂದು ರೈತರ ಪ್ರತಿಭಟನೆ

- Advertisement -

Dharwad News: ಧಾರವಾಡ: ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆಯಿಂದ ಧಾರವಾಡ ಪಾಲಿಕೆ ಪ್ರತ್ಯೆಕವಾಗುತ್ತದೆ ಎಂದು ಕೆಲ ದಿನಗಳ ಹಿಂದಷ್ಟೇ ಘೋಷಣೆಯಾಗಿತ್ತು.

ಆದರೆ ಧಾರವಾಡ ಪಾಲಿಕೆಗೆ ನರೇಂದ್ರ ಮತ್ತು ಮುಮ್ಮಿಗಟ್ಟಿ ಗ್ರಾಮ ಸೇರ್ಪಡೆಯಾಗಬಾರದು ಎಂದು ಇಲ್ಲಿನ ರೈತರು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಗ್ರಾಮವನ್ನು ಪಾಲಿಕೆಯಿಂದ ಕೈ ಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ರೈತರು ಪ್ರತಿಭಟನೆ ನಡೆಸಿ, ಆಗ್ರಹಿಸಿದ್ದಾರೆ.

ನಮ್ಮ ಗ್ರಾಮದಲ್ಲಿ ಕಾರ್ಪೂರೆಟರ್ ಆಡಳಿತ ಬೇಡ ನಮಗೆ ಗ್ರಾಮ ಪಂಚಾಯತ ಆಡಳಿತವೇ ಸಾಕು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮತ್ತು ಜಿಲ್ಲಾಧಿಕಾರಿ ಅವರು ನಮ್ಮ ಪ್ರತಿಭಟನೆಗೆ ಸ್ಪಂದಿಸಬೇಕು ಎಂದು ರೈತರು ಸಚಿವ ಸಂತೋಷ ಲಾಡ್ ಮತ್ತು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

- Advertisement -

Latest Posts

Don't Miss