Dharwad News: ಧಾರವಾಡ: ಬೆಳೆಗೆ ಜಾನುವಾರುಗಳ ಕಾಟದ ಹಿನ್ನೆಲೆ ಧಾರವಾಡದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಶೀಲ್ದಾರ್ ಒಳಗಡೆ ಇದ್ದಾಗಲೇ, ತತಹಶೀಲ್ದಾರ್ ಕಚೇರಿಗೆ ಬೀಗ ಜಡಿದಿದ್ದಾರೆ.
ಧಾರವಾಡದ ಸತ್ತೂರು, ನವಲೂರು ಭಾಗದ ರೈತರು ಈ ರೀತಿಯಾಗಿ ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆ ಕೂಡ ನಡೆಸಿದ್ದಾರೆ.ರಾತ್ರೋ ರಾತ್ರಿ ತಮ್ಮ ಜಮೀನಿಗೆ ತಡಸಿನಕೊಪ್ಪ ಗ್ರಾಮಸ್ಥರ ಜಾನುವಾರುಗಳು ನುಗ್ಗುತ್ತಿದ್ದು, ಇದರಿಂದಾಗಿ ಈ ರೈತರು ಸಂಕಷ್ಟದಲ್ಲಿದ್ದಾರೆ.
ಇದನ್ನು ಖಂಡಿಸಿ, ರೈತರು ಪ್ರತಿಭಟನೆ ನಡೆಸಿದ್ದು, ಇಲ್ಲಿನ ತಹಶೀಲ್ದಾರ್ ಆದ, ದೊಡ್ಡಪ್ಪ ಹೂಗಾರ್ ಒಳಗಿದ್ದಾಗಲೇ ರೈತರು ಬೀಗ ಹಾಕಿದ್ದಾರೆ. ಬಳಿಕ ಉಪನಗರ ಠಾಣೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದ್ದು, ಬಳಿಕ ರೈತರು ಕಚೇರಿಯ ಬೀಗ ತೆಗೆದಿದ್ದಾರೆ.
ಆಸ್ಟ್ರೇಲಿಯಾಕ್ಕೆ ಕೊಕೇನ್ ರಫ್ತು ಮಾಡುತ್ತಿದ್ದ ಭಾರತೀಯ ದಂಪತಿಯ ಬಂಧನ
ಸಾವರ್ಕರ್ ಪತ್ನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ನಟಿ, ಬಿಗ್‌ಬಾಸ್ ಚೆಲುವೆ ಅಂಕಿತಾ ಲೋಖಂಡೆ