Dharwad News: ಧಾರವಾಡ: ಕಳೆದ ಒಂದು ವಾರದಿಂದ ಸುರಿದ ಮಳೆಗೆ ಧಾರವಾಡ ಜಿಲ್ಲೆಯಾದ್ಯಂತ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ವಾಡಕೆಯ ಪ್ರಮಾಣದಷ್ಟು ಸದ್ಯ ಬಿತ್ತನೆಗೆ ಎಷ್ಟು ಬೇಕು ಅಷ್ಟು ಮಳೆ ಆದ ಹಿನ್ನಲೆ, ಧಾರವಾಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭಗೋಂಡಿದೆ.
ಧಾರವಾಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಇನ್ನು ಕಳೆದ ವರ್ಷ ಜೂನ್ ಮೊದಲ ವಾರದಲ್ಲಿ ಬಿತ್ತನೆ ಆರಂಭ ಗೊಂಡಿದ್ದವು. ಸದ್ಯ ಕಳೆದ 8 ದಿನದಿಂದ ಸುರಿದ ಮಳೆಗೆ ಭೂಮಿಯನ್ನ ಕೆಲ ರೈತರು ಹದ ಗೊಳಿಸುತ್ತಿದ್ದರೆ ಇನ್ನು ಕೆಲ ರೈತರು ಬಿತ್ತನೆ ಕಾರ್ಯವನ್ನ ಆರಂಭ ಮಾಡಿದ್ದಾರೆ. ಜಿಲ್ಲೆಯಲ್ಲಿ ವಾಡಿಕೆಯ ಪ್ರಮಾಣದಲ್ಲಿ ಮಳೆ ಯಾಗಿರುವುದರಿಂದ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ರವಿ ಕುರ್ತಕೋಟಿ ಎನ್ನುವ ರೈತರು ಬಿತ್ತನೆ ಕಾರ್ಯ ಆರಂಭ ಮಾಡಿದ್ದಾರೆ.
2028ಕ್ಕೆ ಮತ್ತೆ Congress ಸರ್ಕಾರ ಬರುತ್ತಾ.? Siddaramaiah ಸರ್ಕಾರ 5 ವರ್ಷ ಇರಲ್ವಾ.?
ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ: ಇಬ್ಬರು ಯುವತಿಯರಿಗೆ ಗಂಭೀರ ಗಾಯ