ಅತಿವೃಷ್ಟಿ/ ಅನಾವೃಷ್ಟಿ ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳಲ್ಲಿ ಬೆಳೆ ನಷ್ಟ ಸಂಭವಿಸಿದರೆ, ರೈತರಿಗೆ ಪರಿಹಾರ ನೀಡಲು ನೀಡುವ ಮೂಲಕ ಭದ್ರತೆ ಒದಗಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸಹಕಾರಿಯಾಗಿದ್ದು, ರೈತರು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ: ಎಚ್.ಎನ್ ಗೋಪಾಲ ಕೃಷ್ಣ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು 2022-23 ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಸಂಬAಧಿಸಿದAತೆ ಪ್ರಸ್ತಾವನೆ ಸಲ್ಲಿಸಲು ದಿನಾಂಕವನ್ನು ನಗಧಿಪಡಿಸಲಾಗಿದ್ದು, ರೈತರು ವಿಮಾ ಕಂತುಗಳನ್ನು ಪಾವತಿಸಿ ಎಂದರು.
‘ಮತ್ತೆ ನಮ್ಮ ತೋಟಕ್ಕೆ ಆನೆ ಬಂದರೆ ಹೊಡೆದು ಸಾಯಿಸುತ್ತೇವೆ ‘
2022-23 ನೇ ಸಾಲಿನ ಮುಂಗಾರು ಹಂಗಾಮಿನಿಲ್ಲಿ 31687 ರೈತರು 67.53 ಲಕ್ಷ ಮೊತ್ತದ ವಿಮೆ ಪಾವತಿಸಿದ್ದು, 27077 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ನೊಂದಣಿ ಮಾಡಲಾಗಿದೆ ಎಂದರು.
ಜAಟಿ ಕೃಷಿ ನಿರ್ದೇಶಕ ಅಶೋಕ್ ಅವರು ಮಾತನಾಡಿ ಈ ವರ್ಷ ಅತಿವೃಷ್ಠಿಯಿಂದ ಪ್ರತಿ ಹಂತದಲ್ಲೂ ರೈತರಿಗೆ ತೊಂದರೆಯಾಗುತ್ತಿದೆ. ಬದಲಾಗುತ್ತಿರುವ ಹವಮಾನದಲ್ಲಿ ಫಸಲ್ ಬೀಮಾ ಯೋಜನೆ ಹೆಚ್ಚು ಉಪಯುಕ್ತವಾಗಿದೆ. ಒಂದು ಎಕರೆ ರಾಗಿಗೆ ರೂ 231/- ಪಾವತಿಸಿ 15379/- ರೂ ವಿಮೆಗೆ ನೊಂದಣಿ ಮಡಿಕೊಳ್ಳಬಹುದು ಎಂದರು.
ಕಳೆದ 3 ವರ್ಷಗಳಲ್ಲಿ ಜಿಲ್ಲೆಯ ಎಲ್ಲಾ ಹಂಗಾಮುಗಳಲ್ಲಿ 55571 ರೈತರು 47,286 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ಮಾಡಿಸಲಾಗಿದ್ದು, ರೂ 137.60 ಲಕ್ಷ ರೂ ಪ್ರೀಮಿಯಂ ಪಾವತಿ ಮಾಡಿರುತ್ತಾರೆ. 2146 ಲಕ್ಷ ರೂ ಪರಿಹಾರವನ್ನು ಪಡೆದಿರುತ್ತಾರೆ ಎಂದರು.
ಕಾಲುಬಾಯಿ ರೋಗ ನಿರ್ಮೂಲನಾ ಲಸಿಕಾ ಅಭಿಯಾನಕ್ಕೆ ಸಚಿವ ಡಾ.ನಾರಾಯಣಗೌಡ ಚಾಲನೆ..
ಹಿAಗಾರು ಹಂಗಾಮು ಭತ್ತ ( ನೀರಾವರಿ) ಎಕರೆಗೆ 522 ರೂ, ಹೆಕ್ಟರಿಗೆ 1290 ರೂ ಹಾಗೂ ರಾಗಿ (ನೀರಾವರಿ) ಎಕರೆಗೆ ರೂ 279, ಹೆಕ್ಟರಿಗೆ ರೂ 690 ವಿಮಾ ಕಂತು ಪಾವತಿಸಬೇಕಿದ್ದು, ಪ್ರಸ್ತಾವನೆ ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನಾಂಕವಾಗಿರುತ್ತದೆ. ರಾಗಿ (ಮಳೆ ಆಶ್ರಿತ) ಎಕರೆಗೆ 231 ರೂ, ಹೆಕ್ಟರಿಗೆ 570 ರೂ ವಿಮಾ ಕಂತು ಪಾವತಿಸಬೇಕಿದ್ದು, ಪ್ರಸ್ತಾವನೆ ಸಲ್ಲಿಸಲು ನವೆಂಬರ್ 15 ಕೊನೆಯ ದಿನಾಂPವಾತಿರುತ್ತದೆÀ. ಹುರುಳಿ (ಮಳೆಆಶ್ರಿತ) ಎಕರೆಗೆ 109 ರೂ, ಹೆಕ್ಟರಿಗೆ 270 ರೂ ಹಾಗೂ ಟೊಮ್ಯಾಟೊ ಎಕರೆಗೆ ರೂ 2388, ಹೆಕ್ಟರಿಗೆ 5900ರೂ ವಿಮಾ ಕಂತು ಪಾವತಿಸಬೇಕಿದ್ದು, ಪ್ರಸ್ತಾವನೆ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ ಎಂದರು.
ಬೇಸಿಗೆ ಹಂಗಾಮು ಭತ್ತ (ನೀರಾವರಿ) ಎಕರೆಗೆ ರೂ 522 , ಹೆಕ್ಟರಿಗೆ ರೂ 1290, ರಾಗಿ (ನೀರಾವರಿ) ಎಕರೆಗೆ ರೂ 279, ಹೆಕ್ಟರಿಗೆ ರೂ 690 ಹಾಗೂ ಟೊಮ್ಯಾಟೊ ಎಕರೆಗೆ ರೂ ರೂ 2388, ಹೆಕ್ಟರಿಗೆ ರೂ 5900, ವಿಮಾ ಕಂತು ಪಾವತಿಸಬೇಕಿದ್ದು, ಪ್ರಸ್ತಾವನೆ ಸಲ್ಲಿಸಲು 2023 ಫೆಬ್ರವರಿ 28 ಕೊನೆಯ ದಿನಾಂಕ ಆಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

