ಮಂಡ್ಯ ನಗರದಲ್ಲಿ ಭಗ್ನ ಪ್ರೇಮಿಯಿಂದ ಪ್ರೇಯಸಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯದ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ.
ಯರಹಳ್ಳಿ ಗ್ರಾಮದ ಸಂಪತ್ ಕುಮಾರ್ ಎಂಬಾತ ಅದೇ ಗ್ರಾಮದ ಪ್ಯಾರಾ ಮೆಡಿಕಲ್ ಮಾಡುತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ಭಗ್ನ ಪ್ರೇಮಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಸ್ನೇಹಿತರ ಜೊತೆ ಯುವತಿ ಬರ್ತ್‍ಡೇ ಆಚರಿಸಿಕೊಂಡಿದ್ದ ಸುದ್ದಿ ತಿಳಿದ ಸಂಪತ್, ಮನೆಗೆ ಹೋಗಿ ಗಲಾಟೆ ಮಾಡಿದ್ದಾನೆ. ಗುರುವಾರ ಬೆಳಗ್ಗೆಯಿಂದಲೂ ಕಾಲೇಜು ಬಳಿಯೇ ಹೊಂಚು ಹಾಕಿದ್ದ ಸಂಪತ್, ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್‍ನಲ್ಲಿ ಬಂದು ಕಾಲೇಜು ಆವರಣದಲ್ಲೇ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಸಂಪತ್ ಕುಮಾರ್ ನನ್ನು ಹಿಡಿದು ಸಾರ್ವಜನಿಕರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.