Friday, September 20, 2024

Latest Posts

ಅನಾಹುತ ತಪ್ಪಿಸಲು ಮಹಡಿಯಿಂದ ಮಗುವನ್ನ ಎಸೆದ ಅಪ್ಪ- ವೀಡಿಯೋ ವೈರಲ್..

- Advertisement -

ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು, ಆ ಬೆಂಕಿಯಿಂದ ತಪ್ಪಿಸಿಕೊಳ್ಳೋಕ್ಕೆ ವ್ಯಕ್ತಿಯೋರ್ವ ಬಿಲ್ಡಿಂಗ್‌ನ ಎರಡನೇಯ ಮಹಡಿಯಿಂದ ಮೂರು ವರ್ಷದ ಮಗುವನ್ನ ಕೆಳಗೆ ಎಸೆದ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.

ಕಟ್ಟಡಕ್ಕೆ ಬೆಂಕಿ ತಗುಲಿದ್ದ ವೇಳೆ ತಂದೆ ಮಗು ಕಟ್ಟಡದಲ್ಲಿ ಸಿಲುಕಿದ್ದರು. ಬೆಂಕಿ ತಗುಲಿದ ತಕ್ಷಣ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ.  ಈ ವೇಳೆ ಮಗುವನ್ನು ತಾವು ಹಿಡಿಯುತ್ತೇವೆ, ಕೆಳಗೆ ಬಿಸಾಕಿ ಎಂದು ಹೇಳಿದ್ದಾರೆ. ಆಗ ಆ ವ್ಯಕ್ತಿ ತನ್ನ ಮೂರು ವರ್ಷದ ಮಗುವನ್ನ, ಎರಡನೇಯ ಮಹಡಿಯಿಂದ ಕೆಳಗೆಸೆದಿದ್ದಾನೆ. ಅಮತ್ತು ಅಗ್ನಿಶಾಮಕ ದಳದವರು ಮಗುವನ್ನು ಹಿಡಿದಿದ್ದಾರೆ. ಮಗುವಿಗೆ ಯಾವುದೇ, ಪೆಟ್ಟು ಅಥವಾ ಗಾಯಗಳಾಗಲಿ ಆಗಿಲ್ಲ.

ಇದಾದ ಬಳಿಕ ತಂದೆ ಕೂಡ ಎರಡನೇಯ ಮಹಡಿಯಿಂದ ಜಿಗಿದು, ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಈ ವೀಡಿಯೋವನ್ನ ಸೌತ್ ಬ್ರನ್ಸ್‌ವಿಕ್ ಟೌನ್‌ಶಿಪ್ ಪೊಲೀಸ್ ಡಿಪಾರ್ಟ್‌ಮೆಂಟ್‌ನವರು ಟ್ವೀಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.

- Advertisement -

Latest Posts

Don't Miss