Wednesday, December 11, 2024

Latest Posts

Doddaballapura : 67ನೇ ವರ್ಷದ ಕನಸವಾಡಿ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮ ರಥೋತ್ಸವ..!

- Advertisement -

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (doddabalapura) ತಾಲೂಕಿನ ಪ್ರಸಿದ್ದ ಕ್ಷೇತ್ರ ಮಧುರೆ ಹೋಬಳಿ ಕನಸವಾಡಿಯಲ್ಲಿ (kanasavadi) ಶ್ರೀ ಶನಿಮಹಾತ್ಮ ಸ್ವಾಮಿಯ (Sri Shanimahathma Swamy) 67ನೇ ವರ್ಷದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ (Bangalore, Nedumangala) ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಹಣ್ಣು, ದವನ ಸಮರ್ಪಿಸಿ ಧನ್ಯತೆ ಮೆರೆದರು. ಬ್ರಹ್ಮ ರಥೋತ್ಸವದ ಅಂಗವಾಗಿ, ಶ್ರೀ ಶನಿಮಹಾತ್ಮ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಯಾಗ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಪಾನಕ, ಕೋಸಂಬರಿಗಳನ್ನು ಮಾಡಿಕೊಂಡು ಬಂದಿದ್ದು ರೈತರು ಎತ್ತಿನ ಗಾಡಿಗಳಲ್ಲಿ ತಂದು ಭಕ್ತಾದಿಗಳಿಗೆ ಹಂಚಿಕೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವಕ್ಕೂ ಮುನ್ನ ಶನಿಮಹಾತ್ಮಸ್ವಾಮಿ ಮೆರವಣಿಗೆ ದೇವರನ್ನು ಪಾನಕ ಹಂಚಿಕೆ ಸ್ಥಳಕ್ಕೆ ಹೊತ್ತುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಯಾಗ, ಪೂಜಾ ಕಾರ್ಯಕ್ರಮಗಳಿವೆ. ಮಾರ್ಚ್ 18ರವರೆಗೆ ನಿತ್ಯ ರಾತ್ರಿ 9 ಗಂಟೆಗೆ ಬೆಳ್ಳಿ ರಥ ಉತ್ಸವ,ಪಲ್ಲಕ್ಕಿ ಉತ್ಸವಗಳು, ಅಶ್ವವಾಹನೋತ್ಸವ, ಕಾಕವಾಹನೋತ್ಸವ, ಚಂದ್ರಮಂಡಲೋತ್ಸವ ಕಾರ್ಯಕ್ರಮಗಳಿವೆ. ಮಾ. 15 ರಂದು ರಾತ್ರಿ 9 ಗಂಟೆಗೆ, ಅಶ್ವವಾಹನೋತ್ಸವ ಹಾಗೂ ಮಧ್ಯರಾತ್ರಿ ಮದ್ದಿನ ಮರದ ವಿಶೇಷ ಕಾರ್ಯಕ್ರಮವಿದೆ. ಜಾತ್ರಾ ಸಂದರ್ಭದಲ್ಲಿ ಪ್ರತಿದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಕಳೆದ ಎರಡು ವರ್ಷಗಳಿಂದ ಕೋವಿಡ್ (covid) ನಿಂದಾಗಿ ಸರಳವಾಗಿ ನಡೆದ ಭ್ರಹ್ಮರಥೋತ್ಸವ ಎಲ್ಲಾ ಭಕ್ತರು ಸೇರಿ ಈ ಬಾರಿ ವಿಜ್ರಂಬಣೆಯಿಂದ ಬ್ರಹ್ಮರಥೋತ್ಸವ ನಡೆಸಲಾಗಿದೆ ಎಂದು ಶನಿಮಹಾತ್ಮ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ಕೆ.ವಿ.ಪ್ರಕಾಶ್ (KV Prakash) ತಿಳಿಸಿದ್ದಾರೆ.

ಅಭಿಜಿತ್, ಕರ್ನಾಟಕ ಟಿವಿ,ದೊಡ್ಡಬಳ್ಳಾಪುರ.

           
- Advertisement -

Latest Posts

Don't Miss