Friday, April 11, 2025

Latest Posts

ರೇವಣ್ಣ ಆರೋಪಕ್ಕೆ ಬೇಸತ್ತು ವರ್ಗಾವಣೆ ಕೋರಿದ ಡಿವೈಎಸ್ಪಿ ..

- Advertisement -

ಹಾಸನ- ಹಾಸನ ಡಿವೈಎಸ್ಪಿ ಉದಯ್ ಭಾಸ್ಕರ್ ನಿಷ್ಪಕ್ಷಪಾತ ವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ, ಅವರ ವಿರುದ್ದ ಕ್ರಮಕ್ಕೆ ಹೆಚ್.ಡಿ ರೇವಣ್ಣ ಒತ್ತಾಯ ಹಿನ್ನೆಲೆ, ಮನನೊಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸ್ವಯಂ ವರ್ಗಾವಣೆ ಕೋರಿ ಡಿವೈಎಸ್ಪಿ ಪತ್ರ ಬರೆದಿದ್ದಾರೆ.

ನಾನು ನಿಷ್ಪಕ್ಷಪಾತ, ನೇರ ನುಡಿಯ ವ್ಯಕ್ತಿತ್ವವುಳ್ಳವನು. ರಾಜಕಾರಣಿಗಳು ನನ್ನಿಂದ ಕಾನೂನು ಬಾಹಿರ ಕ್ರಮ ಆಪೇಕ್ಷಿಸುತ್ತಿದ್ದಾರೆ. ಅವರ ಒತ್ತಾಯಗಳಿಗೆ ನಾನು ಮಣಿಯದ ಕಾರಣ ನನ್ನ ವಿರುದ್ದ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ರೇವಣ್ಣ ವಿರುದ್ಧ ಡಿವೈಎಸ್ಪಿ ಬೇಸರ ವ್ಯಕ್ತಪಡಿಸಿದ್ದಾರೆ.

ಬೇಸರದಿಂದಲೇ ತಮ್ಮ ವರ್ಗಾವಣೆ ಗೆ ಬೇಡಿಕೆಯಿಟ್ಟಿರೊ ಉದಯಭಾಸ್ಕರ್ ನನ್ನ ಮೇಲೆ ಆರೋಪ ಮಾಡಿ ನನ್ನ ಮೇಲಾಧಿಕಾರಿಗಳಿಗೆ ಮಾನಸಿಕ ಒತ್ತಡಗಳನ್ನು ನೀಡುತ್ತಿದ್ದಾರೆ. ರಾಜಕಾರಣಿಗಳು ಈ ಚುನಾವಣಾ ಸಂದರ್ಭದಲ್ಲಿ ನಾನು ಸುಗಮವಾಗಿ ಕೆಲಸ ಮಾಡಲು ಅಡ್ಡಿಪಡಿಸಿ ಗೊಂದಲ ಸೃಷ್ಟಿಪಡಿಸುವುದು ಖಚಿತ. ಇದರಿಂದ ಮೇಲಾಧಿಕಾರಿಗಳಿಗೂ ಇರುಸುಮುರುಸು ಉಂಟಾಗುತ್ತದೆ. ಹಾಗಾಗಿ ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ನನ್ನನ್ನು ಹಾಸನ ಜಿಲ್ಲೆಯಿಂದ ತಮಗೆ ಸರಿ ಎನಿಸಿದ ಸ್ಥಳಕ್ಕೆ ತಾತ್ಕಾಲಿಕ ವರ್ಗಾವಣೆಗೆ ಕೋರುತ್ತೇನೆ ಎಂದು ಪತ್ರದಲ್ಲಿ ಉದಯ್ ಭಾಸ್ಕರ್ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಯಾವುದು ಆ್ಯಕ್ಟಿವಿಟಿ ಇಲ್ಲ-ಡಾ ಕೆ ಸುಧಾಕರ್…!

ಡಿಕೆಶಿ ಬಂಧನದ ವೇಳೆ ಆಸ್ತಿ ನಷ್ಟ.. ನಷ್ಟ ಆದವರು ಅರ್ಜಿ ಸಲ್ಲಿಸಲು ಅವಕಾಶ..

ನೀತಿ ಸಂಹಿತೆ ಉಲ್ಲಂಘಿಸಿದ ಕೊಡಗಿನ ಶಾಸಕರಿಗೆ ನೋಟಿಸ್

- Advertisement -

Latest Posts

Don't Miss