Tuesday, April 15, 2025

Latest Posts

ಫೆನ್ಸಿಂಗ್ನಲ್ಲಿ ಚಿನ್ನ ಗೆದ್ದ ಭವಾನಿ ದೇವಿ

- Advertisement -

ಲಂಡನ್:  ಭಾರತೀಯ ಅಥ್ಲೀಟ್ ಭವಾನಿ ದೇವಿ ಕಾಮನ್‍ವೆಲ್ತ್  ಫೆನ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ  ಚಿನ್ನ ಗೆದ್ದು ಪದಕ ಉಳಿಸಿಕೊಂಡಿದ್ದಾರೆ.

ನಂ.42ನೇ ವಿಶ್ವ ರ್ಯಾಂಕ್ ಆಟಗಾರ್ತಿ ಆಸ್ಟ್ರೇಲಿಯಾದ 2ನೇ ಶ್ರೇಯಾಂಕಿತೆ ವೆರೊನಿಕಾ ವಾಸಿಲ್ವೆ ಅವರನ್ನು  15-10 ಅಂಕಗಳಿಂದ ಸೋಲಿಸಿದರು.

ಈ ಚಿನ್ನದ ಪದಕದೊಂದಿಗೆ  ಒಲಿಂಪಿಕ್ಸ್‍ಗೆ ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇತ್ತಿಚೆಗೆ  ಇಸ್ತಾನ್‍ಬುಲ್‍ನಲ್ಲಿ ನಡೆದ ವಿಶ್ವಕಪ್‍ನಲ್ಲಿ ಕೊನೆಯ 32ನೇ ಸ್ಥಾನ ಪಡೆಯುವುದಕ್ಕೂ ವಿÀಲರಾಗಿದ್ದರು. ಇದೀಗ ಈ  ಸ್ವರ್ಣ ಪದಕದ ಗೆಲುವು ಭವಾನಿ ದೇವಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಫೆನ್ಸಿಂಗ್ ಅಸೋಸಿಯೇಷನ್ ಆïಫ್ ಇಂಡಿಯಾದ ಕಾರ್ಯದರ್ಶಿ ರಾಜೀವ್ ಮೆಹ್ತಾ ಅಭಿನಂದಿಸಿದ್ದಾರೆ.

ತುಂಬ ಕಠಿಣವಾದ ಫೈನಲ್ ಆಗಿತ್ತು. ಈ ವರ್ಷ ಭಾರತಕ್ಕೆ ಇನ್ನೊಂದು ಚಿನ್ನದ ಪದಕ ಗೆದ್ದು ಕೊಟ್ಟಿದ್ದೇನೆ. ಈ ವರ್ಷ ತುಂಬ ಒಳ್ಳೆಯ ಪ್ರವಾಸವಾಗಿದೆ.  ಮುಂದಿನ ಟೂರ್ನಿಗಳಲ್ಲೂ ಇದೇ ಪ್ರದರ್ಶನವನ್ನು ಮುಂದುವರೆಸಲು ನಿರ್ಧರಿಸಿದ್ದೇನೆ. ತವರಿನ ಬೆಂಬಲ ತುಂಬ ಚೆನ್ನಾಗಿದೆ ಎಂದು ಭವಾನಿ ದೇವಿ ಹೇಳಿದ್ದಾರೆ.

 

- Advertisement -

Latest Posts

Don't Miss