International News: ಗಿನಿಯಾದ ಎನ್‌ಜೆರೆಕೋರ್ ಎಂಬಲ್ಲಿ ಫುಟ್‌ಬಾಲ್ ಪಂದ್ಯಾವಳಿ ನಡೆದಿದ್ದು, ಈ ವೇಳೆ ರೆಫ್ರಿ ಕೊಟ್ಟ ತೀರ್ಪೀನಿಂದ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟು, 100ಕ್ಕೂ ಹೆಚ್ಚು ಜನರ ಸಾವಾಗಿದೆ.
ಸ್ಥಳೀಯ ಆಸ್ಪತ್ರೆಯಲ್ಲಿ ಹೆಣಗಳ ರಾಶಿ ಇದ್ದು, ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ. ಫುಟ್‌ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ, ರೆಫ್ರಿ ಕೊಟ್ಟ ತೀರ್ಪು ಸರಿ ಇಲ್ಲವೆಂದು ಎರಡೂ ತಂಡದ ಆಟಗಾರರು ವಾಗ್ವಾದಕ್ಕಿಳಿದಿದ್ದಾರೆ. ಆದರೆ ಪುಟ್ಟ ಜಗಳ, ದೊಡ್ಡ ಯುದ್ಧದಂತೆ ಮಾರ್ಪಾಡಾಗಿ, ಆಟಗಾರರು ಸೇರಿ, ಆಟ ವೀಕ್ಷಿಸಲು ಬಂದ ಹಲವು ಜನರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಕಾಲ್ತುಳಿತಕ್ಕೆ ಜನ ಬಲಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ, ಸ್ಥಳೀಯ ಪೊಲೀಸ್ ಠಾಣೆಯನ್ನು ಕೂಡ ಧ್ವಂಸ ಮಾಡಲಾಗಿದೆ ಎಂದು ಸುದ್ದಿಯಾಗಿದೆ.
https://twitter.com/guineeinfos_com/status/1863335526159282333