Thursday, April 17, 2025

Latest Posts

‘ಆ ಮೂರು ಜನರನ್ನು ಮುದುರಿ, ಮೂಲೆಗೆ ಹಾಕಿ ನಮ್ಮ ರವಿ ಅಣ್ಣನನ್ನ ಪಕ್ಕಾ ಗೆಲ್ಲಿಸುತ್ತಾರೆ’

- Advertisement -

ಮಂಡ್ಯ: ಇಂದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಫೈಟರ್ ರವಿ ನಾಮಪತ್ರ ಸಲ್ಲಿಸಿದ್ದಾರೆ. ನಾಗಮಂಗಲ ವಿಧಾನ ಕ್ಷೇತ್ರದ ಪಕ್ಷೇತರ  ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದರು.

ಕಳೆದ 2 ವರ್ಷಗಳಿಂದ ಸಮಾಜ ಸೇವಕನಾಗಿ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ರವಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಕೆಲ ಕಾರಣಗಳಿಂದ ಫೈಟರ್‌ ರವಿಗೆ ಟಿಕೇಟ್ ಸಿಗದ ಕಾರಣ, ರವಿ ಪಕ್ಷ ತೊರೆದಿದ್ದಾರೆ. ನಂತರ ತಮ್ಮ ಬೆಂಬಲಿಗರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಈ ವೇಳೆ ಅವರ ಬೆಂಬಲಿಗರು ಮಾತನಾಡಿದ್ದು, ಅವರು ಮೊದಲಿನಿಂದಲೂ ಸಮಾಜ ಸೇವೆ ಮಾಡಿದವರು. ಮುಂದೆಯೂ ಅವರು ಸಮಾಜಸೇವೆ ಮಾಡುತ್ತಾರೆ. ಆದರೂ ಅವರಿಗೆ ಬಿಜೆಪಿಯಲ್ಲಿ ಟಿಕೇಟ್ ಸಿಗಲಿಲ್ಲ. ಹಾಗಾಗಿ ಅವರು ಪಕ್ಷೇತರವಾಗಿ ಚುನಾವಣೆಗೆ ನಿಂತಿದ್ದಾರೆ. ಅವರಿಗೆ ದೇವರು ಬೇಕಾದಷ್ಟು ಕೊಟ್ಟಿದ್ದಾರೆ. ರಾಜಕೀಯದಿಂದ ಅವರಿಗೆ ಸಂಪಾದನೆ ಬೇಕಾಗಿಲ್ಲ. ನಾಗಮಂಗಲದ ಜನರು ಅವರಿಗೆ ಗೆಲ್ಲಿಸಿದ್ರೆ, ನಾಗಮಂಗಲಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.

ಇನ್ನೋರ್ವ ಬೆಂಬಲಿಗ ಮಾತನಾಡಿದ್ದು, ಮೊದಲೆಲ್ಲ ಕಾಂಗ್ರೆಸ್ ಜೆಡಿಎಸ್ ಅಂತಾ ಇತ್ತು. ಆದರೀಗ ಬಿಜೆಪಿಯೂ ಸೇರಿದೆ. ಆದರೆ ಅವರು ಮೋಸ ಮಾಡಿದ್ರು. ಹಾಗಾಗಿ ನಾಗಮಂಗಲದ ಜನ ಆ ಮೂರು ಜನರನ್ನು ಮುದುರಿ, ಮೂಲೆಗೆ ಹಾಕಿ ನಮ್ಮ ರವಿ ಅಣ್ಣನನ್ನ ಪಕ್ಕಾ ಗೆಲ್ಲಿಸಿಕೊಡ್ತಾರೆ. ಅವರು ಇನ್ನೂರು ಹಳ್ಳಿಗಳಿಗೆ ತಮ್ಮದೇ ಸ್ವಂತ ಹಣದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ಕೆಲಸವನ್ನ ಯಾವ ಎಂಎಲ್‌ಎ, ಎಂಪಿನೂ ಮಾಡಕ್ಕಾಗಿಲ್ಲಾ ಎಂದು ಹೇಳಿದ್ದಾರೆ.ತ

- Advertisement -

Latest Posts

Don't Miss