Finance Knowledge: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು, ಹಣದುಬ್ಬರದ ಬಗ್ಗೆ ವಿವರಣೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಾಗಲಿದ್ದು, ಇಂದು 100 ರೂಪಾಯಿಗೆ ಸಿಗುವ ವಸ್ತುಗಳು ಕೆಲವೇ ವರ್ಷಗಳಲ್ಲಿ 500, ಸಾವಿರ ತಲುಪುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ ಹಣವನ್ನು ಮನೆಯಲ್ಲೇ ಇರಿಸಿ, ಹಾಳು ಮಾಡುವ ಬದಲು, ಜನ ಅದನ್ನು ಬೆಳೆಸುವ ಬಗ್ಗೆ ಆಲೋಚಿಸಬೇಕು ಅಂತಾರೆ ಡಾ.ಭರತ್ ಚಂದ್ರ.
ಹಾಗಾಗಿ ಕೆಲವು ಬ್ಯಾಂಕ್ನಲ್ಲಿ ಪೋಸ್ಟ್ ಆಫೀಸ್ನಲ್ಲಿ ಇರಿಸುತ್ತಾರೆ. ಆದರೆ ಅದರಿಂದ ಬರುವ ಲಾಭ ಹಣದುಬ್ಬರವನ್ನು ಮೀರಿಸಲು ಸಾಧ್ಯವಿಲ್ಲ. ಹಾಗಾಗಿ ನಾವು ಹೆಚ್ಚು ಲಾಭ ಬರುವ ದಾರಿ ಹುಡುಕಬೇಕು. ಅದಕ್ಕಾಗಿ ನೀವು ಕೆಲವು ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ನೀವು ಹೂಡಿಕೆ ಮಾಡಬಹುದು. ಕೆಲವು ಹಣವನ್ನು ಬ್ಯಾಂಕ್ನಲ್ಲಿ ಇಡಬೇಕು.
5 ಪರ್ಸೆಂಟ್ ಹಣ ಇನ್ಶುರೆನ್ಸ್ ಮಾಡಿಸಬೇಕು. ಇನ್ನು 5 ಪರ್ಸೆಂಟ್ ಹಣವನ್ನು ನೀವು ಗೋಲ್ಡ್ನಲ್ಲಿ ಹಾಕಬಹುದು. ಉಳಿದ ಹಣವನ್ನು ಶೇರ್ ಮಾರ್ಕೇಟ್ ಮತ್ತು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವ ಪ್ರಯತ್ನ ಮಾಡಬೇಕು. ಏಕೆಂದರೆ, ಮ್ಯೂಚುವಲ್ ಫಂಡ್ನಲ್ಲಿ ಹೆಚ್ಚು ಲಾಭ ಗಳಿಸಬಹುದು. ಈ ರೀತಿಯಾಗಿ ಹಣವನ್ನು ವರ್ಗೀಕರಣ ಮಾಡಬಹುದು.




