Finance Knowledge: ಹಣಕಾಸು ತಜ್ಞರಾಗಿರುವ ಡಾ.ಭರತ್ ಚಂದ್ರ ಅವರು ಶೇರ್ ಮಾರ್ಕೇಟ್‌ನಲ್ಲಿ ಹಣ ಹೂಡಿಕೆ ಮಾಡುವುದು ಮತ್ತು ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ವಿವರಣೆ ನೀಡಿದ್ದಾರೆ.
ತಜ್ಞರು ಹೇಳುವ ಪ್ರಕಾರ, ಶೇರ್ ಮಾರ್ಕೇಟ್‌ನಲ್ಲಿ ಹಣ ಹೂಡಿಕೆ ಮಾಡಿದ್ರೆ, ಲಾಭ ಹೆಚ್ಚು. ಅದೇ ರೀತಿ ರಿಸ್ಕ್ ಸಹ ಹೆಚ್ಚು. ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡಿದ್ರೆ, ಲಾಭ ಬರಲು ಹಲವು ಸಮಯ ಬೇಕು. ರಿಸ್ಕ್ ಕಡಿಮೆ. ಆದರೆ ಇದರಲ್ಲಿ ಇಷ್ಟೇ ಲಾಭ ಬರುತ್ತದೆ ಅಂತಾ ಹೇಳಲಾಗುವುದಿಲ್ಲ.
ಏಕೆಂದರೆ ಕೆಲವು ಶೇರ್ ಗಳು ಲಾಂಗ್ ಟರ್ಮ್ ಲಾಭ ನೀಡುತ್ತದೆ. ಕೆಲವು ಲಾಂಗ್ ಟರ್ಮ್‌ನಲ್ಲೂ ಲಾಭ ನೀಡುವುದಿಲ್ಲ. ಮ್ಯೂಚುವಲ್ ಫಂಡ್‌ನಲ್ಲೂ ಸಹ ಇದೇ ರೀತಿ ಇರುತ್ತದೆ. ಕೆಲವು ಬಾರಿ ಲಾಭ ಕೆಲವು ಬಾರಿ ಲಾಸ್. ಹಾಾಗಾಗಿ ನನಗೆ ಲಾಭವೇ ಬೇಕು ಎಂದಾದರೆ ನೀವು ಸರ್ಕಾರಕ್ಕೆ ಸಂಬಂಧಿಸಿದ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಬಹುದು. ಎಫ್‌ಡಿ ಇಡಬಹುದು.




