Friday, July 4, 2025

Latest Posts

ಟ್ವಿಟರ್ ಅಧಿಕಾರಿಗಳ ವಿರುದ್ಧ FIR

- Advertisement -

www.karnatakatv.net:-ರಾಷ್ಟ್ರೀಯ: ನೋಯ್ಡಾ- ಸಾಮಾಜಿಕ ಜಾಲತಾಣದಲ್ಲಿ ಭಾರತದ ಭೂಪಟವನ್ನು ತಪ್ಪಾಗಿ ಬಿಂಬಿಸಿದ್ದ ಟ್ವಿಟರ್ ಇಂಡಿಯಾ ಸಂಸ್ಥೆಯ ಇಬ್ಬರು ಉನ್ನತ ಅಧಿಕಾರಿಗಳ ವಿರುದ್ಧ ಉತ್ತರಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭಜರಂಗದವರು ನೀಡಿದ ದೂರಿನ ಆಧಾರದ ಮೇಲೆ ಉತ್ತರಪ್ರದೇಶದ ಖುಜರ್ ನಗರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಟ್ವಿಟರ್ ನಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯಗಳು ಭಾರತ ಭೂಪಟದಿಂದ ಹೊರಗಿರುವುದಾಗಿ ಬಿಂಬಿಸಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕೂಡಲೇ ಸಂಸ್ಥೆಯವರು ವಿವಾದಿತ ಭೂಪಟ ಚಿತ್ರವನ್ನು ತೆರವು ಮಾಡಿದ್ರು. ಟ್ವಿಟರ್ ಸಂಸ್ಥೆಯವರು ಭಾರತೀಯರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಭಜರಂಗದಳದವರು ಕಿಡಿಕಾರಿದ್ದಾರೆ.

- Advertisement -

Latest Posts

Don't Miss