ರಾಯಚೂರು: ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದ ದಾರಿಯಲ್ಲಿ ಸಿಎಂ ಕುಮಾರಸ್ವಾಮಿ ಪ್ರಯಾಣಿಸುತ್ತಿದ್ದ ಬಸ್ ತಡೆದ ಘಟನೆ ಕುರಿತಾಗಿ 50 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂ 26ರಂದು ರಾಯಚೂರಿನ ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ತೆರಳುತ್ತಿದ್ದ ವೇಳೆ ಏಕಾಏಕಿ ವೈಟಿಪಿಎಸ್ ಸಿಬ್ಬಂದಿ ರಸ್ತೆ ತಡೆ ನಡೆಸಿದ್ರು. ಇದರಿಂದ ಸಿಎಂ ಕೆಂಡಾಮಂಡಲರಾಗಿ ಅವರ ಮೇಲೆ ರೋಷಾವೇಶ ತೋರಿದ್ರು. ಇನ್ನು ರಸ್ತೆ ತಡೆದು ಸಾರ್ವಜನಿಕರಿಗೆ ಅನಾವಶ್ಯಕವಾಗಿ ತೊಂದರೆಯುಂಟು ಮಾಡುತ್ತಿದ್ದರು ಎಂಬ ಆರೋಪದ ಮೇಲೆ 50 ಜನರ ಮೇಲೆ ಎಫ್ ಐಆರ್ ದಾಖಲಾಗಿದೆ. ಈ ಬಗ್ಗೆ ಪಿಎಸ್ಐ ನಿಂಗಪ್ಪ ಎಂಬುವರು ಪ್ರತಿಭಟನಾಕಾರರ ವಿರುದ್ಧ ದೂರು ದಾಖಲಿಸಿದ್ದರು. ಹೀಗಾಗಿ ಟಿಯುಸಿಐ ರಾಜ್ಯಾಧ್ಯಕ್ಷ ಮಾನಸಯ್ಯ, ಅಮರೇಶ್ ಮತ್ತು ರವಿಚಂದ್ರ ಎಂಬುವರು ಸೇರಿ ಒಟ್ಟು 50 ಮಂದಿ ಮೇಲೆ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿಯ 143,147, 149, 341 ಸೆಕ್ಷನ್ ಅಡಿಯಲ್ಲಿ 50 ಮಂದಿಯ ಮೇಲೆ ಇದೀಗ ಎಫ್ ಐಆರ್ ದಾಖಲಾಗಿದೆ.
ಇನ್ನು ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಅಂತ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.
ಅಪ್ಪಿ ತಪ್ಪಿ ಕುಡಿದು ಗಾಡಿ ಓಡಿಸಿದ್ರೋ..ಮುಗೀತು ನಿಮ್ ಕಥೆ..!ಮಿಸ್ ಮಾಡದೇ ಈ ವಿಡಿಯೋ ನೋಡಿ