Wednesday, September 11, 2024

Latest Posts

ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆ ವಿರುದ್ಧ ಎಫ್‌ಐಆರ್ ದಾಖಲು

- Advertisement -

National News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಅನುಮತಿ ಪಡೆದ ಮಾರ್ಗವನ್ನು ಬಿಟ್ಟು, ಬೇರೆ ಮಾರ್ಗದಿಂದ ಯಾತ್ರೆ ಹೊರಟಿದ್ದರ್ರೆ, ಅಸ್ಸಾ ಪೊಲೀಸರು, ನ್ಯಾಯ ಯಾತ್ರೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಅಸ್ಸಾಂನ ಜರ್ಹತ್ ನಗರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಯ ಯಾತ್ರೆಯ ತಂಡ, ಯಾವ ಮಾರ್ಗದಿಂದ ಹೋಗಬೇಕು ಎಂದು ಅನುಮತಿ ಕೋರಿದ್ದರೋ, ಅದನ್ನು ಬಿಟ್ಟು ಬೇರೆ ಮಾರ್ಗದಿಂದ, ನ್ಯಾಯ ಯಾತ್ರೆಗಾಗಿ ಸಾಗಿದ್ದಾರೆ. ಈ ವೇಳೆ ಆ ಮಾರ್ಗದಲ್ಲಿ ಪೊಲೀಸ್ ಬಂದೋಬಸ್ತ್ ಇಲ್ಲದೇ, ಅಲ್ಲಿನವರಿಗೆ ಈ ವಿಷಯ ಗೊತ್ತಿಲ್ಲದೇ, ಆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ರಾಹುಲ್ ಗಾಂಧಿಯನ್ನು ಕಂಡು, ಜನ ಏಕಾಏಕಿ ಮುಗಿಬಿದ್ದು, ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದೆ.

ಈ ಕಾರಣಕ್ಕೆ ಜೋರ್ಹತ್ ಪೊಲೀಸ್ ಠಾಣೆಯಲ್ಲಿ ಯಾತ್ರೆ, ಮತ್ತು ಕಾರ್ಯಕ್ರಮವನ್ನು ನಿಯೋಜನೆ ಮಾಡಿದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಯಾತ್ರೆ ಮಾಡುವಾಗ ಅನುಸರಿಸಬೇಕಾದ ನಿಯಮವನ್ನು ಅನುಸರಿಸಿಲ್ಲವೆಂದು ಮತ್ತು ರಸ್ತೆಯಲ್ಲಿ ನೂಕುನುಗ್ಗಲಾಗಿ, ಗೊಂದಲದ ವಾತಾವರಣ ನಿರ್ಮಾಣಲವಾದ ಕಾರಣಕ್ಕೆ, ಪ್ರಕರಣ ದಾಖಲಿಸಲಾಗಿದೆ.

ಈ ಕಾರಣಕ್ಕೆ ಕಾಂಗ್ರೆಸ್ ಅಸ್ಸಾಂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಇದು ನ್ಯಾಯ ಯಾತ್ರೆಯನ್ನು ನಿಲ್ಲಿಸುವ ಹುನ್ನಾರವಾಗಿದೆ ಎಂದು ಕಿಡಿಕಾರಿದ್ದಾರೆ.

ಅನ್ನಪೂರ್ಣಿ ಸಿನಿಮಾದಲ್ಲಿ ರಾಮನ ಡೈಲಾಗ್ ಬಗ್ಗೆ ಹೇಳಿಕೆ ನೀಡಿದ ನಟಿ ನಯನತಾರಾ

ಅಯೋಧ್ಯಾ ರಾಮಮಂದಿರ ಕಾರ್ಯಕ್ರಮ :ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತನಾದ ರಾಮಲಲ್ಲಾ

ಅಯೋಧ್ಯೆ ಗರ್ಭಗುಡಿಯಲ್ಲಿ ಆಸೀನನಾದ ರಾಮಲಲ್ಲಾ: ಪಟ ವೈರಲ್

 

- Advertisement -

Latest Posts

Don't Miss