Saturday, December 21, 2024

Latest Posts

ಸಿ.ಟಿ.ರವಿ ಬಂಧನ ಖಂಡಿಸಿ, ಪ್ರತಿಭಟಿಸಿದವರ ವಿರುದ್ಧ ಎಫ್‌ಐಆರ್ ದಾಖಲು

- Advertisement -

Political News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪ್ರಾಸ್ಟಿಟ್ಯೂಟ್ ಎಂದು ಕರೆದಿದ್ದಾರೆಂದು ಆರೋಪಿಸಿ, ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಿಸಿ, ನಿನ್ನೆ ಅವರನ್ನು ಬಂಧಿಸಲಾಗಿತ್ತು. ಈ ಬಂಧನ ಖಂಡಿಸಿ, ಬಿಜೆಪಿ ಕಾರ್ಯಕರ್ತರು, ರವಿ ಬೆಂಬಲಿಗರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದರು. ಇಂದು ಪ್ರತಿಭಟನೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲಾ ಘಟನಕದ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಸೇರಿ ಹಲವರ ವಿರುದ್ಧ ಬಸವನಹಳ್ಳಿ ಠಾಣೆ ಸೇರಿ, ನಗರ ಮೂರೂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 100ಕ್ಕೂ ಹೆಚ್ಚು ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇವರೆಲ್ಲ ಅನುಮತಿ ಇಲ್ಲದೇ, ಅಂಗಡಿ ಮುಂಗಟ್ಟು ಮುಚ್ಚಿಸಿದ್ದಾರೆ. ಹೆದ್ದಾರಿ ತಡೆದಿದ್ದಾರೆ. ಬೈಕ್ ಟಯರ್ ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸಿದ್ದು, ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಾರೆಂದು 100ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸುವರ್ಣ ಸೌಧದಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ, ಕಾಂಗ್ರೆಸ್ ನಾಯಕರೆಲ್ಲ ಸೇರಿ, ಅಂಬೇಡ್ಕರ್ ಫೋಟೋ ಹಿಡಿದು ಪ್ರೊಟೆಸ್ಟ್ ಮಾಡಿದ್ದರು. ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಎದುರು ಸಿ.ಟಿ.ರವಿ ರಾಹುಲ್‌ ಗಾಂಧಿ ಓರ್ವ ಡ್ರಗ್ ಅಡಿಕ್ಟ್ ಎಂದು ಹೇಳಿದ್ದು, ಅದಕ್ಕೆ ಪ್ರತಿಕ್ರಿಯಿಸಿದ್ದ ಹೆಬ್ಬಾಳ್ಕರ್ ನೀವು ಅಪಘಾತ ಮಾಡಿದ್ದೀರಿ. ಅಂದರೆ ನೀವು ಕೊಲೆಗಾರರಾಗುತ್ತೀರಿ ಎಂದಿದ್ದರು ಎಂದು ನಿನ್ನೆ ಹೆಬ್ಬಾಳ್ಕರ್ ಸ್ವತಃ ಪ್ರೆಸ್‌ ಮೀಟ್‌ನಲ್ಲಿ ಹೇಳಿದ್ದರು.

ಇದಾದ ಬಳಿಕ ರವಿ ಲಕ್ಷ್ಮೀ ಅವರನ್ನು ಪ್ರಾಸ್ಚಿಟ್ಯೂಟ್ ಎಂದು ಕರೆದರು ಎಂದು ಆರೋಪಿಸಿ, ಸುವರ್ಣ ಸೌಧದಲ್ಲೇ ದಾಂಧಲೆ ನಡೆದಿತ್ತು. ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ರವಿ ಅವರನ್ನು ಬಂಧಿಸಲಾಗಿತ್ತು. ಆದರೆ ತಾವು ಪ್ರಾಸ್ಟಿಟ್ಯೂಟ್ ಎಂದು ಹೇಳಲಿಲ್ಲ. ಬದಲಾಗಿ ಫ್ರಸ್ಟ್ರೇಶನ್ ಎಂದು ಹೇಳಿದ್ದು ಎಂದು ಸಿ.ಟಿ.ರವಿ ತಮ್ಮ ವಿರುದ್ಧವಿದ್ದ ಆರೋಪವನ್ನು ತಳ್ಳಿ ಹಾಕಿದ್ದಾರೆ.

- Advertisement -

Latest Posts

Don't Miss