International News: ಮಾರಿಷಿಯಸ್‌ನಲ್ಲಿ ಶಿವರಾತ್ರಿಗೂ ಮುನ್ನ ನಡೆಸಿದ ಪೂಜೆಯ ಕಾರ್ಯಕ್ರಮದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ.
ಮಾರಿಷಿಯಸ್‌ನಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿ ಹಿಂದೂಗಳ ಹಬ್ಬವನ್ನು ಎಲ್ಲರೂ ಸೇರಿ ಮಾಡುತ್ತಾರೆ. ಹೀಗಾಗಿ ಶಿವರಾತ್ರಿಯ ಪೂಜೆಗಾಗಿ ಜನ ಗ್ರ್ಯಾಂಡ್ ಬೆಸಿನ್ ಸರೋವರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದರು.
ಬಳಿಕ ದೊಡ್ಡ ಶಿವಲಿಂಗದ ಬಳಿ ಶಿವರಾತ್ರಿಯ ಪೂಜೆ ನಡೆಯಬೇಕಿತ್ತು. ಆದರೆ ಶಿವಲಿಂಗಕ್ಕೆ ಬೆಂಕಿ ತಗುಲಿ, ಸ್ಥಳದಲ್ಲೇ 6 ಮಂದಿ ಮೃತಪಟ್ಟಿದ್ದು, ಹಲವು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇವರ ವಿಗ್ರಹ ವಿದ್ಯುತ್ ತಂತಿಗೆ ಸ್ಪರ್ಶಿಸಿ, ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು: ಡಿಸಿಎಂ ಡಿಕೆಶಿ




