- Advertisement -
ಮುಂಬೈನ ಫಿಲ್ಮ್ ಸಿಟಿಯಲ್ಲಿರುವ ಬಿಗ್ ಬಾಸ್ 15 ರ ಸೆಟ್‌ಗೆ ಬೆಂಕಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಲ್ಮಾನ್ ಖಾನ್ ಈ ಕಾರ್ಯಕ್ರವನ್ನ ನಿರೂಪಣೆ ಮಾಡುತ್ತಿದ್ದರು. ಜನವರಿ 30 ರಂದು ಬಿಗ್‌ಬಾಸ್ 15 ರ ಗ್ರ್ಯಾಂಡ್ ಫಿನಾಲೆ ಕೊನೆಗೊಂಡಿತ್ತು. ಸದ್ಯ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಬೆಂಕಿ ಆರಿಸಿದ್ದಾರೆ.
ಸ್ಥಳದಲ್ಲಿದ್ದ ಕೆಲ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಆದರೆ, ಯಾವುದೇ ಪ್ರಾಣಹಾನಿಯಾಗಿಲ್ಲ. ಬೆಂಕಿ ತಗುಲಿದ್ದಕ್ಕೆ ಕಾರಣವೇನು ಎಂದು ಇನ್ನೂ ತಿಳಿದು ಬಂದಿಲ್ಲ.
ನಾಲ್ಕು ತಿಂಗಳುಗಳ ಕಾಲ ನಡೆದಿದ್ದ ಬಿಗ್‌ಬಾಸ್ ಕಾರ್ಯಕ್ರಮ, ಜನವರಿ 30ಕ್ಕೆ ಅಂತ್ಯವಾಯಿತು. ಬಿಗ್‌ಬಾಸ್ ಸೀಸನ್ 15ರಲ್ಲಿ ತೆಜಸ್ವಿನಿ ಪ್ರಕಾಶ್ ಟ್ರೋಫಿ ಗೆದ್ದಿದ್ದು, 40 ಲಕ್ಷ ರೂಪಾಯಿಯನ್ನೂ ತಮ್ಮದಾಗಿಸಿಕೊಂಡಿದ್ದರು. ಪ್ರತೀಕ್ ಶೆಜ್ವಾಲ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
- Advertisement -